ಪುತ್ತೂರು ನಗರದಲ್ಲಿ ನೀರಿನ ಸಮಸ್ಯೆ ಪೈಪ್ ಒಡೆದ ು ನೀರು ಪೋಲು

Posted on May 10, 2011

0


ಪುತ್ತೂರು: ಪುತ್ತೂರು ಪುರಸಭಾ ವ್ಯಾಪ್ತಿಯ ಪಡೀಲು ಚಿಕ್ಕಪುತ್ತೂರು ರೈಲ್ವೇ ಸ್ಟೇಷನ್ ಪರಿಸರದಲ್ಲಿ ಕುಡಿ ಯುವ ನೀರಿನ ಸಮಸ್ಯೆ ತಲೆದೋರಿದೆ. ಆದರೆ ಬನ್ನೂರಿನ ಜೈನರಗುರಿ ಎಂಬಲ್ಲಿ ನೀರು ಸರಬರಾಜಿನ ಕೊಳವೆ ಒಡೆದ ಕಾರಣ ನೀರು ರಸ್ತೆ ಮೇಲೆ ಹರಿ ಯುತ್ತಿದೆ. ಒಂದೆಡೆ ನೀರಿಗಾಗಿ ಜನತೆ ಪರದಾಡುತ್ತಿದ್ದರೆ ಇನ್ನೊಂದೆಡೆ ನೀರು ಪೋಲಾಗುತ್ತಿದೆ.

ಪಡೀಲು ಪರಿಸರದಲ್ಲಿ ಕಳೆದ ಆರು ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಕುಡಿಯುವ ನೀರಿಗಾಗಿ ಪರದಾಡ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆಯ ಬಗ್ಗೆ ಪುರಸಭೆಗೆ ತಿಳಿಸಿದರೆ ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂಬುವುದು ಇಲ್ಲಿನ ನಾಗರಿಕರ ಆರೋಪವಾಗಿದೆ.

ಚಿಕ್ಕಪುತ್ತೂರು ರೈಲ್ವೇ ಸ್ಟೇಷನ್ ಪರಿಸರಕ್ಕೂ ಕಳೆದ ಕೆಲ ದಿನಗಳಿಂದ ನೀರು ಸರಬರಾಜು ಆಗಿಲ್ಲ ಎಂದು ಅಲ್ಲಿನ ನಾಗರಿಕರು ಆರೋಪಿಸಿದ್ದಾರೆ. ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿ ಸುವಂತೆ ನಾಗರಿಕರು ಪುರಸಭಾಡಳಿತ ವನ್ನು ಆಗ್ರಹಿಸಿದ್ದಾರೆ. ಪುತ್ತೂರು ಪುರ ಸಭೆ ವ್ಯಾಪ್ತಿಯ ಬನ್ನೂರು ಗ್ರಾಮದ ಜೈನರಗುರಿಯಲ್ಲಿ ನೀರು ಸರಬರಾಜಿನ ಕೊಳವೆ ಒಡೆದು ನೀರು ವ್ಯರ್ಥವಾಗಿ ಪೋಲಾಗುತ್ತಿದೆ. ಕಳೆದ ಒಂದು ವಾರದ ಹಿಂದೆಯೇ ನೀರಿನ ಕೊಳವೆ ಒಡೆದಿ ದ್ದರೂ ಇಲ್ಲಿ ಕೇಳುವವರಿಲ್ಲ. ಸ್ಥಳೀಯ ಪುರಸಭಾ ಸದಸ್ಯರಿಗೆ ಈ ಕುರಿತು ಸ್ಥಳೀಯರು ಮಾಹಿತಿ ನೀಡಿ ವ್ಯವಸ್ಥೆ ಯನ್ನು ಸರಿಪಡಿಸುವಂತೆ ಆಗ್ರಹಿಸಿದರೂ ಅವರು ಸ್ಪಂದಿಸದೆ ಬೇಜವಾಬ್ದಾರಿತನ ತೋರಿದ್ದಾರೆ ಎಂಬ ಆರೋಪ ಸಾರ್ವಜನಿಕ ರಿಂದ ಕೇಳಿ ಬರುತ್ತಿದೆ.

ಪುರಸಭಾ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಯೇ ನೀರು ಸರಬರಾಜು ವ್ಯವಸ್ಥಿತ ವಾಗಿಲ್ಲ. ಇಲ್ಲಿ ನೀರು ಇದೆ ಆದರೆ ಅದರ ಸರಬರಾಜು ವ್ಯವಸ್ಥೆ ಸರಿ ಯಿಲ್ಲ. ಅದರಿಂದಾಗಿಯೇ ಇಲ್ಲಿ ಸಮಸ್ಯೆಗಳಾಗುತ್ತಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನತೆಯ ಮೂಲ ಭೂತ ಸೌಕರ್ಯಗಳಲ್ಲಿ ಒಂದಾಗಿರುವ ಕುಡಿಯುವ ನೀರಿನ ಸರಬರಾ ಜು ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿ ನೀರಿನ ಸಮಸ್ಯೆ ಯನ್ನು ಬಗೆಹರಿಸ ಬೇಕು ಎನ್ನು ವುದು ಇಲ್ಲಿನ ಜನತೆಯ ಬೇಡಿಕೆ ಯಾಗಿದೆ.

Advertisements
Posted in: Special Report