ತಲೆಮರೆಸಿಕೊಂಡಿದ್ದ ಸರಗಳ್ಳನ ಸೆರೆ

Posted on May 10, 2011

0


ಪಡುಬಿದ್ರಿ: ಮನೆ ಪಕ್ಕದ ಮಹಿಳೆ ಯೋರ್ವರ ಕುತ್ತಿಗೆಯಿಂದ ಚಿನ್ನದ ಸರ ಎಳೆದು ಪರಾರಿಯಾಗಿ ತಲೆ ಮರೆಸಿಕೊಂಡಿದ್ದ ಆರೋ ಪಿಯನ್ನು ಪಡುಬಿದ್ರಿ ಪೊಲೀಸರು ಬಂಧಿ ಸಿದ್ದಾರೆ.

ಫಲಿಮಾರು ಗ್ರಾಮದ ಕೋಡಿ ನಿವಾಸಿ ಕಮಲ ಎಂಬವರು ಎಪ್ರಿಲ್ ೧೯ರಂದು ಪಕ್ಕದ ಮನೆಯಲ್ಲಿ ಟಿವಿ ವೀಕ್ಷಿಸಿ ಮನೆ ಕಡೆ ಬರು ತ್ತಿದ್ದಾಗ ಹೆಜಮಾಡಿಕೋಡಿ ನಿವಾಸಿ ಸುಕೇಶ ಎಂಬಾತ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ಸುಮಾರು ೬೫ ಸಾವಿರ ಮೌಲ್ಯದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ.

ಸುಕೇಶನನ್ನು ನಿನ್ನೆ ಪಡುಬಿದ್ರಿ ಪೊಲೀ ಸರು ಬಂಧಿಸಿದ್ದು, ಸುರತ್ಕಲ್‌ನ ಬ್ಯಾಂಕೊಂ ದರಲ್ಲಿ ಅಡವಿಟ್ಟಿದ್ದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಐಷಾರಾಮಿ ಜೀವನವನ್ನು ಬಯಸಿದ್ದ ಸುಕೇಶ್ ಸಾಲ್ಯಾನ್ ಸಾಲ ಮಾಡಿ ಬೈಕನ್ನು ಖರೀದಿಸಿದ್ದ. ಸಾಲ ತೀರಿಸಲು ಕಷ್ಟವಾಗಿದ್ದರಿಂದ ಚಿನ್ನದ ಸರ ವನ್ನು ಎಗರಿಸಿದ್ದಾಗಿ ವಿಚಾರಣೆ ವೇಳೆ ಒಪ್ಪಿ ಕೊಂಡಿದ್ದಾನೆ. ಐಟಿಐ ವಿದ್ಯಾರ್ಥಿಯಾಗಿದ್ದ ಈತ ಉತ್ತಮ ಕ್ರಿಕೆಟ್ ಆಟಗಾರನಾಗಿದ್ದ.

Advertisements
Posted in: Special Report