ಚೆನ್ನೈಗೆ ೬೩ ರನ್ ಜಯ ತವರಲ್ಲಿ ಮುಗ್ಗರಿಸಿದ ವಾರ ್ನ್ ಪಡೆ

Posted on May 10, 2011

0


ಜೈಪುರ್: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಶ್ರೇಷ್ಠ ಆಟ ಪ್ರದರ್ಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ಎದುರಾಳಿ ರಾಜಸ್ತಾನ್ ವಿರುದ್ಧ ೬೩ ರನ್‌ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಟಾಸ್ ಸೋತು ಫೀಲ್ಡಿಂಗ್ ನಡೆಸಿದ ಚೆನ್ನೈ ನಿಗದಿತ ೨೦ ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ೧೯೬ ರನ್ ಪೇರಿಸಿತು. ಗುರಿ ಬೆನ್ನತ್ತದ್ದ ರಾಜಸ್ತಾನ್ ೧೯.೩ ಓವರ್‌ಗಳಲ್ಲಿ ೧೩೩ ರನ್‌ಗಳಿಗೆ ಸರ್ವಪತನ ಕಂಡು ಹೀನಾಯವಾಗಿ ಸೋಲು ಕಂಡಿತು. ರಾಜಸ್ತಾನ್ ಉತ್ತಮ ಆರಂಭ ಪಡೆಯುವಲ್ಲಿ ಮತ್ತೆ ವಿಫಲವಾಯಿತು. ರಾಹುಲ್ ದ್ರಾವಿಡ್ ವೇಗದ ಆಟ ಪ್ರದರ್ಶಿಸುತ್ತಿದ್ದರೂ ೨೦ ರನ್ ಗಳಿಸಿದ್ದ ಸಂದರ್ಭ ವಿಕೆಟ್ ಕಳೆದುಕೊಂಡರು. ವಾಟ್ಸನ್ (೧೧) ವಿಕೆಟ್ ಕಳೆದುಕೊಂಡಾಗ ತಂಡದ ಗೆಲುವಿನ ಆಸೆಗೆ ತೀವ್ರ ಹಿನ್ನೆಡೆಯಾಯಿತು. ಆದರೆ ನಂತರ ಬಂದ ಟೇಲರ್ (೬) ಹಾಗೂ ಮನೇರಿಯಾ (೨) ಕೂಡ ತನ್ನ ವಿಕೆಟ್ ಅಗ್ಗಕ್ಕೆ ಕಳೆದುಕೊಂಡಾಗ ತಂಡದ ಸೋಲು ಖಚಿತವಾಗಿತ್ತು. ಆದರೆ ಈ ವೇಳೆ ರಹಾಣೆ ಕೇವಲ ೩೫ ಎಸೆತಗಳಲ್ಲಿ ೫೨ ರನ್ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿ ಬಳಿಕ ನಿರ್ಗಮಿಸಿದರು. ಬೋಥಾ (೧೪) ಕೂಡ ತಂಡದ ನೆರವಿಗೆ ಬರಲಿಲ್ಲ. ಬೊಲಿಂಜರ್ ಮೂರು ವಿಕೆಟ್ ಕಬಳಿಸಿ ದರು. ರಾಜಸ್ತಾನ್ ತನ್ನ ಅಂತಿಮ ಐದು ವಿಕೆಟ್‌ಗಳನ್ನು ೨೮ ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಚೆನ್ನೈ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಹಸ್ಸಿ ಹಾಗೂ ವಿಜಯ್ ಮೊದಲ ವಿಕೆಟ್‌ಗೆ ವೇಗದ ೭೭ ರನ್‌ಗಳನ್ನು ಕಲೆಹಾಕಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ವೇಳೆ ೩೦ ಎಸೆತಗಳಲ್ಲಿ ೪೬ ರನ್ ಗಳಿಸಿದ್ದ ಹಸ್ಸಿ ವಿಕೆಟ್ ಕಳೆದುಕೊಂಡರು. ವಿಜಯ್ (೫೩) ನಂತರ ಬಂದ ರೈನಾ ಜೊತೆ ಎರಡನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿ ತಂಡಕ್ಕೆ ಆಧಾರವಾಗಿದ್ದರು. ವಿಜಯ್ ತನ್ನ ಅರ್ಧಶತಕದ ಆಟದಲ್ಲಿ ಮೂರು ಸಿಕ್ಸ್ ಹಾಗೂ ಎರಡು ಬೌಂಡರಿ ಬಾರಿಸಿದ್ದರು. ರೈನಾ ಕೂಡ ೪೩ ರನ್ ದಾಖಲಿಸಿದರು. ಆದರೆ ಅಂತಿಮ ಹಂತದಲ್ಲಿ ನಾಯಕ ಧೋನಿ ಕೇವಲ ೧೯ ಎಸೆತಗಳಲ್ಲಿ ಅಜೇಯ ೪೧ ರನ್ ಗಳಿಸಿ ತಂಡದ ಮೊತ್ತವನ್ನು ೧೯೦ರ ಗಡಿ ದಾಟಿಸಿದರು.

Advertisements
Posted in: Sports News