ಕುರುಂಜಿ ಪುತ್ರನೇ ಸೂತ್ರಧಾರಿ!

Posted on May 10, 2011

0


ಮಂಗಳೂರು: ಸುಳ್ಯ ಕೆ.ವಿ.ಜಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರಾಮಕೃಷ್ಣರ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ದ.ಕ. ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣದ ಪ್ರಮುಖ ಆರೋಪಿಗಳಾದ ಕೆವಿಜಿ ಸಂಸ್ಥಾಪಕ ಕುರುಂಜಿಯವರ ಪುತ್ರನ ಸಹಿತ ಐವ ರನ್ನು ಪೊಲೀಸರು ಬಂಧಿಸಿದ್ದಾರೆ.

ಕೆವಿಜಿ ಶಿಕ್ಷಣ ಸಂಸ್ಥೆಗಳನ್ನು ಅಣ್ಣ ತಮ್ಮಂದಿರಿಗೆ ಪಾಲು ಮಾಡುವ ವಿಚಾರದಲ್ಲಿ ಆಡಳಿತಾಧಿಕಾರಿ ಹಸ್ತಕ್ಷೇಪ ನಡೆಸಿದ್ದಾರೆ ಎನ್ನುವ ಅಸಮಾಧಾನವೇ ಕೊಲೆಗೆ ಮೂಲ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ತಿ ಪಾಲಿನ ವಿಚಾರದಲ್ಲಿ ಅಸಮಧಾನ ಗೊಂಡಿರುವ ಕುರುಂಜಿಯವರ ಕಿರಿಯ ಪುತ್ರ ರೇಣುಕಾ ಪ್ರಸಾದ್, ತನ್ನ ಆಪ್ತರಿಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಕಾಲೇಜಿನ ಆಡಳಿತ ಮತ್ತು ಆಸ್ತಿ ವಿಂಗಡಣೆ ವಿಚಾರದಲ್ಲಿ ತಂದೆಯಲ್ಲಿ ತನ್ನ ಬಗ್ಗೆ ಸಲ್ಲದ ಮಾತುಗಳನ್ನಾಡಿ ತನಗೆ ಲಾಭದಾಯಕವಲ್ಲದ ಶಿಕ್ಷಣ ಸಂಸ್ಥೆ ದೊರೆ ಯುವಂತೆ ಮಾಡಿದ್ದಲ್ಲದೆ, ಆರ್ಥಿಕ ವ್ಯವಹಾರ ನಿರ್ವಹಣೆಯಲ್ಲೂ ತನ್ನ ಮೇಲೆ ಹಕ್ಕು ಸಾಧಿ ಸಲು ಯತ್ನಿಸುತ್ತಿದ್ದ ಆಡಳಿತಾಧಿಕಾರಿ, ರಾಮ ಕೃಷ್ಣ ಮೇಲೆ ವೈಷಮ್ಯವನ್ನು ಹೊಂದಿದ್ದ ರೇಣುಕಾ ಪ್ರಸಾದ್, ಅವರನ್ನು ಮುಗಿಸುವ ತೀರ್ಮಾನ ಕೈಗೊಂಡಿದ್ದರು. ಇದಕ್ಕಾಗಿ ತಮ್ಮ ಸಂಸ್ಥೆಯಲ್ಲಿ ದುಡಿಯುತ್ತಿರುವ ಮನೋಜ್, ನಾಗೇಶ ಹಾಗೂ ವಾಮನ ಅವರ ಸಹಾ ಯವನ್ನು ಪಡೆದಿದ್ದರು.

ಇವರೆಲ್ಲ ಜೊತೆಯಾಗಿ ಕುಳಿತು ಕೊಲೆಯ ಯೋಜನೆಯನ್ನು ರೂಪಿಸಿದ್ದರು. ಅದರಂತೆ ವಾಮನ ಎಂಬಾತ ಈ ಹಿಂದೆ ಕೊಲೆ, ದರೋಡೆ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದ ಮಂಗಳೂರಿನ ಶರಣ್ ಹಾಗೂ ಶಂಕರ್ ಎಂಬವರಿಗೆ ಐದು ಲಕ್ಷ ರುಪಾಯಿಗೆ ಸುಪಾರಿ ಯನ್ನು ನೀಡಲಾಗಿತ್ತು. ಬಳಿಕ ಇವರು ಕೊಲೆಗೆ ಸ್ಕೆಚ್ ಹಾಕಿದ್ದರು. ವಾಮನನೇ ರಾಮ ಕೃಷ್ಣರ ಚಲನವಲನಗಳ ಬಗ್ಗೆ ಶರಣ್ ಹಾಗೂ ಶಂಕರ್‌ಗೆ ಮಾಹಿತಿಯನ್ನು ನೀಡುತ್ತಿದ್ದ. ಇದನ್ನು ಆಧರಿಸಿ ಅವರು ಎಪ್ರಿಲ್ ೨೮ರಂದು ಸಂಜೆ ವಾಕಿಂಗ್ ಹೊರಟಿದ್ದ ರಾಮಕೃಷ್ಣ ಅವರನ್ನು ಕಡಿದು ಕೊಲೆ ಮಾಡಿದ್ದರು.

ಸುಳ್ಯವನ್ನು ಮಾದರಿ ತಾಲೂಕಾಗಿ ರೂಪಿ ಸಿದ್ದ ಮತ್ತು ಉತ್ತಮ ಶಿಕ್ಷಣ ವ್ಯವಸ್ಥೆಗೆ ಹೆಸ ರಾಗಿದ್ದ ಕೆ.ವಿ.ಜಿ ಶಿಕ್ಷಣ ಸಂಸ್ಥೆಯ ಆಡಳಿ ತಾಧಿಕಾರಿಯ ಕೊಲೆ ಇಡೀ ಸುಳ್ಯವನ್ನೇ ಬೆಚ್ಚಿ ಬೀಳಿಸಿತ್ತು. ಮಾತ್ರವಲ್ಲದೆ ಪ್ರಕರಣ ವನ್ನು ಶೀಘ್ರವೇ ಭೇದಿಸುವಂತೆ ಪೊಲೀಸರ ಮೇಲೆ ಒತ್ತಡವೂ ಇತ್ತು. ಈ ನಿಟ್ಟಿನಲ್ಲಿ ಎಸ್.ಪಿ ಲಾಬೂರಾಮ್ ಅವರು ಪ್ರಕರಣದ ತನಿಖೆ ಯನ್ನು ಪುತ್ತೂರು ಎಎಸ್‌ಪಿಯವರಿಗೆ ಒಪ್ಪಿಸಿದ್ದರು ಮತ್ತು ತನಿಖೆಗಾಗಿ ಐದು ತಂಡ ಗಳನ್ನು ರಚಿಸಲಾಗಿತ್ತು.

ಐದೂ ತಂಡಗಳು ಪ್ರತ್ಯೇಕವಾದ ತನಿಖೆ ಗಳನ್ನು ನಡೆಸಿದ್ದವು. ಸೀಟು ಹಂಚಿಕೆಯ ವಿಚಾರ, ಮಧ್ಯವರ್ತಿಗಳ ವಂಚನೆ, ಕಾಲೇಜಿನ ಹಣ ದುರುಪಯೋಗ, ಹುಡುಗಿಯರ ವಿಚಾರ ಹಾಗೂ ಆಸ್ತಿ ವಿಂಗಡನೆ ತಕರಾರು ಹೀಗೆ ಬೇರೆ ಬೇರೆ ದೃಷ್ಟಿಕೋನದಲ್ಲಿ ತನಿಖೆ ನಡೆಸಿದಾಗ ಆಸ್ತಿ ವಿಂಗಡಣೆ ಬಗ್ಗೆ ಆಗಾಗ ತಕರಾರು ನಡೆಯತ್ತಿದ್ದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಈ ನಿಟ್ಟಿನಲ್ಲಿ ತನಿಖೆ ಸಾಗುತ್ತಿರಬೇಕಾದರೆ ಒಮ್ಮೆ ವಿಚಾರಣೆಗೆ ಹಾಜರಾಗಿದ್ದ ರೇಣುಕಾ ಪ್ರಸಾದ್ ಬಳಿಕ ನಾಪತ್ತೆಯಾಗಿದ್ದ. ಇದು ಪೊಲೀಸರ ಸಂಶಯವನ್ನು ಮತ್ತಷ್ಟು ಹೆಚ್ಚಿಸಿದ್ದು ತನಿಖೆಯನ್ನು ಈ ನಿಟ್ಟಿನಲ್ಲಿ ಮುನ್ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು ಕಾಲೇಜಿನಲ್ಲಿ ವಿಚಾರಣೆ ನಡೆಸುತ್ತಿದ್ದಾಗ ಇಲ್ಲಿನ ಸುಪರ್‌ವೈಸರ್ ಆಗಿ ರುವ ಮನೋಜ್, ಕುರುಂಜಿಯವರ ಫಾರ್ಮ್ ಹೌಸ್ ಮೂರನೇ ಪುಟಕ್ಕೆ

Advertisements
Posted in: Special Report