ಎಡನೀರು ಮೇಳದ ಮದ್ದಲೆಗಾರ ಪ್ರಭಾಕರ ಗೋರೆ ನಿಧನ

Posted on May 10, 2011

0


ಮಂಗಳೂರು: ಎಡನೀರು ಯಕ್ಷಗಾನ ಕಲಾಮೇಳದ ಚೆಂಡೆ, ಮದ್ದಳೆ ವಾದಕ ಪ್ರಭಾಕರ ಗೋರೆ(೫೨)ಅವರು ಮೊನ್ನೆ ಸಂಜೆ ಮಣಿಪಾಲ ಎಂಜಿಎಂ ಕಾಲೇಜು ಬಳಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಎಡನೀರು ಮೇಳದ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದು, ಸೋಮವಾರ ಪ್ರದರ್ಶನದಲ್ಲಿ ಭಾಗವಹಿಸಲು ಗೋರೆ ಅವರು ತಮ್ಮ ಊರಾದ ಕಾರ್ಕಳ ಬಜಗೋಳಿಯಿಂದ ಬೈಕ್‌ನಲ್ಲಿ ಸಂಜೆ ಐದಕ್ಕೆ ಉಡುಪಿಗೆ ಬರುತ್ತಿದ್ದರು. ಈ ಸಂದರ್ಭ ಎಂಜಿಎಂ ಕಾಲೇಜು ಬಳಿ ಬಸ್ ಡಿಕ್ಕಿಯಾಗಿ ತೀವ್ರ ಗಾಯಗೊಂಡ ಗೋರೆ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಗರಿ ಭಾಗವತರ ಮೊಮ್ಮಗರಾದ ಗೋರೆ, ಕರ್ನಾಟಕ ಮೇಳದಲ್ಲಿ ೨೮ವರ್ಷ, ಮಂಗಳಾದೇವಿ ಮೇಳದಲ್ಲಿ ಐದು ವರ್ಷ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಕಳೆದೊಂದು ವರ್ಷದಿಂದ ಎqನೀರು ಮೇಳದಲ್ಲಿ ಮದ್ದಳೆಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನದ ಪ್ರಯುಕ್ತ ರಾಜಾಂಗಣದಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನವನ್ನು ರದ್ದುಗೊಳಿಸಲಾಯಿತು.

ಕುಮಾರಸ್ವಾಮಿ ನೇಣು ಹಾಕಿಕೊಳ್ಳುವುದು ಬೇಡ: ಡಿ.ವಿ.

ಮಂಗಳೂರು: ತನ್ನ ಮೇಲಿನ ಆರೋಪಗಳು ಸಾಬೀತಾದರೆ ನೇಣು ಹಾಕಿಕೊಳ್ಳುವುದಾಗಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಹೇಳಿದ್ದಾರೆ. ಈ ರೀತಿಯ ಹೇಳಿಕೆ ಮಾಜಿ ಮುಖ್ಯಮಂತ್ರಿಯೋರ್ವರಿಗೆ ಶೋಭೆ ತರುವಂತಹದ್ದಲ್ಲ. ಅವರು ನೇಣು ಹಾಕಿಕೊಳ್ಳುವುದು ಬೇಡ. ಜೈಲಿನಲ್ಲಿ ಕುಳಿತು ತಾವು ಮಾಡಿದ ತಪ್ಪಿನ ಪಶ್ಚಾತ್ತಾಪ ಮಾಡಿಕೊಂಡರೆ ಸಾಕು ಎಂದು ಡಿ.ವಿ. ವಂಗ್ಯವಾಡಿದರು. ನಿನ್ನೆ ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಮಾಲಕತ್ವದ ಬಿಎಚ್‌ಕೆ ಕಂಪೆನಿಗೆ ಗಣಿ ಉದ್ಯಮಿಗಳಿಂದ ೧೬೭ ಕೋಟಿ ರೂ. ಹಣ ದೇಣಿಗೆ ರೂಪದಲ್ಲಿ ಹರಿದು ಬಂದಿದೆ. ಇದರ ಬಗ್ಗೆ ಮಾತನಾಡದ ಅವರು ಬಿಜೆಪಿ ನಾಯಕರ ಬಗ್ಗೆ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಳೆದ ಒಂದು ದಶಕದಿಂದ ಅಕ್ರಮ ಅದಿರು ಗಣಿಗಾರಿಕೆ ನಡೆಯುತ್ತಿದ್ದು, ಇದರ ಹೊಣೆಗಾರರು ಆಗಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಆಡಳಿತಗಾರರೇ ಆಗಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿಟ್ಟು ಜನಾಂದೋಲನ ಹಾಗೂ ರಾಜಭವನ ಚಲೋ ಎಂಬ ಹೋರಾಟಗಳನ್ನು ನಡೆಸುತ್ತಿದ್ದಾರೆ ಕಳೆದ ಒಂದು ದಶಕದಲ್ಲಿ ೭೮೦ ಲಕ್ಷ ಟನ್ ಅದಿರು ರಫ್ತ್ತಾಗಿದೆ ಅದರಲ್ಲಿ ೩೦೦ ಲಕ್ಷ ಟನ್ ಅಕ್ರಮ. ಇದೆಲ್ಲವೂ ಕಾಂಗ್ರೆಸನ ಎಸ್.ಎಂ.ಕೃಷ್ಣ , ಧರ್ಮಸಿಂಗ್ ಹಾಗೂ ಕುಮಾರಸ್ವಾಮಿ ಅಧಿಕಾರದಲ್ಲಿ ನಡೆದ ಅಕ್ರಮಗಳು ಎಂದು ಆರೋಪಿಸಿದರು.

Advertisements
Posted in: Local News