ಎಎಸ್ಬಿಸಿ ಬಾಕ್ಸಿಂಗ್: ಚಿನ್ನ ಗೆದ್ದ ಮೇರಿ

Posted on May 10, 2011

0


ಹೈಕೊ (ಚೀನಾ): ಏಶ್ಯನ್ ಚಾಂಪಿಯನ್ ಕಿಮ್ ಯೊಂಗ್ ಸಿಮ್ ವಿರುದ್ಧ ಜಯ ಸಾಧಿಸುವ ಮೂಲಕ ಭಾರತದ ಮೇರಿ ಕೋಮ್ ಇಲ್ಲಿ ನಡೆಯುತ್ತಿರುವ ಎಎಸ್‌ಬಿಸಿ ಮಹಿಳಾ ಏಶ್ಯನ್ ಬಾಕ್ಸಿಂಗ್ ಕಪ್‌ನ ೪೮ ಕೆ.ಜಿ ವಿಭಾಗದ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಉತ್ತರ ಕೊರಿಯಾದ ಸಿಮ್ ವಿರುದ್ಧ ಐದು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಮೇರಿ ೪-೩ರ ಅಂತರದಲ್ಲಿ ಜಯ ಸಾಧಿಸಿ ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ. ಕಳೆದ ವರ್ಷ ಗ್ವಾನ್ಝೋನಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ ಇದು ಮೇರಿ ಕೋಮ್ ರದ್ದು ಮೊದಲ ಜಯವಾಗಿದೆ.

Advertisements
Posted in: Sports News