ಆತ್ಮಹತ್ಯೆಗೈದ ಮಹಿಳೆಯ ಮೊಬೈಲ್ ಸಿಮ್ ಕಾಣೆ

Posted on May 10, 2011

0


ಕಾರ್ಕಳ: ನಗರ ಠಾಣಾ ವ್ಯಾಪ್ತಿಯ ನಿಂಜೂರು ಎಂಬಲ್ಲಿ ರವಿವಾರದಂದು ನಿಗೂಢ ರೀತಿಯಲ್ಲಿ ಆತ್ಮಹತ್ಯೆಗೈದಿರುವ ಮಹಿಳೆಯ ಮೊಬೈಲ್‌ಸಿಮ್ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಪತಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ನಲ್ಲೂರು ಬಜಗೋಳಿಯ ಆನಂದ ಶೆಟ್ಟಿ ಎಂಬವರ ಮಗಳಾದ ದಿವ್ಯಾ ಶೆಟ್ಟಿ(೨೨) ಎಂಬಾಕೆ ನಿಂಜೂರಿನಲ್ಲಿರುವ ಗಂಡನ ಮನೆಯಲ್ಲಿ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದಳು. ಆ ವೇಳೆಗೆ ಆಕೆಯ ಒಂದು ವರ್ಷದ ಮಗ ಮಾತ್ರ ಇದ್ದ. ಅವಿಭಕ್ತ ಕುಟುಂಬಕ್ಕೆ ಸೇರಿದ್ದ ಮನೆಯಲ್ಲಿ ದಿವ್ಯ ಆಕೆಯ ಗಂಡ ಪ್ರಶಾಂತ್ ಶೆಟ್ಟಿ ಮತ್ತು ಮಗು ಸೇರಿದಂತೆ ಮೂವರು ಮಾತ್ರ ವಾಸವಾಗಿದ್ದರು. ಪ್ರಶಾಂತನ ತಂದೆ ಕೃಷ್ಣ ಶೆಟ್ಟಿ ಪಾರ್ಶ್ವವಾಯಗೆ ಒಳಗಾಗಿರುವುದರಿಂದ ಅವರು ಪಡುಬಿದ್ರಿಯ ಮತ್ತೊಂದು ಮನೆಯಲ್ಲಿ ವಾಸಮಾಡುತ್ತಿದ್ದರೆಂದು ತಿಳಿದುಬಂದಿದೆ.

ಪ್ರಶಾಂತ್ ಶೆಟ್ಟಿ ಮಣಿಪಾಲದ ಪ್ರೆಸ್‌ವೊಂದರಲ್ಲಿ ದುಡಿಯುತ್ತಿದ್ದಾರೆ. ಕೆಲಸಕ್ಕೆ ಹೋಗುವ ಮೊದಲು ಅವರು ಮನೆಕೆಲಸ ಮಾಡಿ ಪತ್ನಿಗೆ ನೆರವಾಗುತ್ತಿರುವುದು ಅವರ ದಿನಚರಿಯಾಗಿತ್ತೆಂದು ತಿಳಿದುಬಂದಿದೆ. ದಂಪತಿ ಅನ್ಯೋನ್ಯವಾಗಿ ಇದ್ದರೆಂದು ನಿಕಟವರ್ತಿ ಮೂಲಗಳಿಂದ ತಿಳಿದುಬಂದಿದೆ. ರವಿವಾರದಂದು

ಮೂರನೇ ಪುಟಕ್ಕೆ

Advertisements
Posted in: Crime News