‘ನೆನಪಿನಂಗಳ’ ಕೃತಿ ಬಿಡುಗಡೆ

Posted on May 9, 2011

0


ಮಂಗಳೂರು: ಬಲ್ಮಠ ಆರ್ಕಿಡ್ ಆರ್ಟ್ ಗ್ಯಾಲರಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಲೇಖಕಿ ಜಾಹ್ನವಿ ಟಿ.ಕೆ. ಆಳ್ವ ಕಂದಾವರ ಅವರ ವಿವಿಧ ಬರಹಗಳ ಸಂಗ್ರಹ ವಾದ ‘ನೆನಪಿನಂಗಳ’ ಕೃತಿಯನ್ನು ಹಿರಿಯ ಸಾಹಿತಿ ಏರ್ಯ ಲಕ್ಷ್ಮಿ ನಾರಾಯಣ ಆಳ್ವ ಬಿಡುಗಡೆ ಮಾಡಿದರು.

ಟಿ.ಕೆ. ಆಳ್ವ ಕಂದಾವರ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಸಮಾರಂಭದಲ್ಲಿ ಭಾಗವಹಿಸಿದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ವಾಗತಿಸಿದರು, ವೃಂದಾ ಎಸ್. ಹೆಗ್ಡೆ ಮತ್ತು ಸುಜಯ ಸೇಮಿತ ಪ್ರಾರ್ಥಿಸಿದರು, ದಿನೇಶ್ ಹೊಳ್ಳ ಪ್ರಸ್ತಾವನೆಗೈದರು. ವಿಶ್ವಪ್ರಸಾದ್ ಆಳ್ವ, ವೇಣುಗೋಪಾಲ ಆಳ್ವ, ಉದಯ ಶೆಟ್ಟಿ ಮಲಾರ್ ಜಯರಾಮ ರೈ ಉಪಸ್ಥಿತ ರಿದ್ದರು. ವಿದ್ಯಾ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು. ಸುಜಯ ಶೆಟ್ಟಿ ವಂದಿಸಿದರು.

Posted in: Special Report