ಹಿಮ್ಮೇಳ ಮಂಗಳೂರಿಗರಿಗೆ ವೆನ್ಲಾಕ್ ಎಂಬ ನರಕ ಸಾ ಕ್ಷಾತ್ಕಾರa ವೈದ್ಯರ ಅಸಡ್ಡೆಯ ಮುಮ್ಮೇಳಕ್ಕೆ, ಲಂಕಿಣ ಿ ನರ್ಸ್ಗಳ!

Posted on May 9, 2011

0


ಕೇವಲ ನಾಲ್ಕು ದಿನಗಳ ಹಿಂದಿನ ಮಾತು. ಅದ್ಯಪಾಡಿಯ ಮೆಹ್ತಾಬ್ ಎಂಬ ಹುಡುಗ ಜಾರಿ ಬಿದ್ದು ಕೈಮೂಳೆ ಮುರಿದು ಕೊಂಡಿದ್ದ. ಆತನನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈ ಹುಡುಗನಿಗೆ ಚಿಕಿತ್ಸೆ ನೀಡಿದ ರೀತಿಯು ವೆನ್ಲಾಕ್ ಆಸ್ಪತ್ರೆಯ ಚಪರಾಸಿಯಿಂದ ಹಿಡಿದು ವೈದ್ಯರ ತನಕ ಪ್ರತಿಯೊಬ್ಬರ ಹಣೆಬರಹ ವನ್ನೂ ಹರಾಜಿಗಿಟ್ಟಿತು. ಯಾವನೋ ಒಬ್ಬ ಅರೆಬೆಂದ ವೈದ್ಯ, ಗಾಯಾಳು ಹುಡುಗನಿಗೆ ಅದೇನೋ ಚಿಕಿತ್ಸೆ ನೀಡಿ ಹರಕೆ ಸಂದಾ ಯದ ಹರುಷದಲ್ಲಿ ಹೊರಟು ಹೋದ. ಆದರೆ ಹುಡುಗ ಗಾಯ ಉಲ್ಬಣಿಸಿ ಸಾಕಷ್ಟು ನರಳಿದ. ಮರುದಿನ ಮತ್ತೊಬ್ಬ ವೈದ್ಯ ಬಂದು ಹಿಂದಿನ ದಿನದ ವೈದ್ಯ ಮಾಡಿದ್ದನ್ನೂ ಕೂಡಾ ಲಗಾಡಿ ತೆಗೆದು ತನಗೆ ಪುರುಸೊತ್ತಿಲ್ಲ ಎಂಬ ಕಾರಣ ನೀಡಿ ಜಾಗ ಖಾಲಿ ಮಾಡಿದ್ದ. ಈ ಬೇಜವಾಬ್ದಾರಿ ವೈದ್ಯರುಗಳ ಅಸಡ್ಡೆಯ ಮುಮ್ಮೇಳಕ್ಕೆ, ಇಲ್ಲಿನ ಲಂಕಿಣಿ ನರ್ಸುಗಳ ಹಿಮ್ಮೇಳವೂ ಸೇರಿ ವೆನ್ಲಾಕಿನ ಅಳಿದುಳಿದ ಮಾನ ಮರ್ಯಾದೆಯೂ ಪತ್ರಿಕೆಗಳು ಹಾಗೂ ಟಿವಿ ಚಾನೆಲ್‌ಗಳ ಚಾವಡಿಗಳಲ್ಲಿ ಮೂರಾಬಟ್ಟೆಯಾಗಿ ಹೋಯಿತು.

ಈ ಪ್ರಕರಣ ಹಸಿಹಸಿಯಾಗಿರುವಾಗಲೇ ನಡೆದ ಇನ್ನೊಂದು ಪ್ರಕರಣ ಓದುಗರ ಗಮನಕ್ಕೆ ತರಬೇಕಾಗಿದೆ. ಕುಂಬಳೆ ಸಮೀಪದ ಬದಿಯಡ್ಕದ ವ್ಯಕ್ತಿಯೊಬ್ಬರು ಗಂಟಲಿನಲ್ಲಿನ ಗೆಡ್ಡೆಯ ಚಿಕಿತ್ಸೆಗಾಗಿ ವೆನ್ಲಾಕ್‌ಗೆ ದಾಖಲಾ ಗಿದ್ದರು. ಕಾಸರಗೋಡಿನ ವೈದ್ಯರು ಅದು ಕ್ಯಾನ್ಸರ್ ಇರಬಹುದೆಂದು ಮಂಗಳೂರಿಗೆ ಕಳುಹಿಸಿದ್ದರು. ಆದರೆ ವೆನ್ಲಾಕ್‌ನ ಪಾಖಂಡಿ ಸಿಬ್ಬಂದಿ ವರ್ಗ ಆ ವ್ಯಕ್ತಿಯನ್ನು ನಡೆಸಿಕೊಂಡ ರೀತಿ ಮೊದಲಿನ ಪ್ರಕರಣಕ್ಕಿಂತ ಭಿನ್ನವಾಗಿ ಯೇನೂ ಇರಲಿಲ್ಲ. ಆರ್ಥಿಕವಾಗಿ ನೆಲಮುಟ್ಟಿ ಹೋಗಿದ್ದ ಆ ವ್ಯಕ್ತಿಯ ಅಸಹಾಯಕ ಪತ್ನಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಅಸಮರ್ಥರಾಗಿರುವ ಇಬ್ಬರು ಗಂಡು ಮಕ್ಕಳ ನಡುವೆಯೂ ಏಗಿಕೊಂಡು, ಇನ್ನೊಬ್ಬ ಮಗಳ ಕೊನೆಯ ಪುಟಕ್ಕೆ

Posted in: Special Report