ಸುಳ್ಯ ಆಡಳಿತಾಧಿಕಾರಿ ಕೊಲೆ: ಆರೋಪಿಗಳ ಸೆರೆ

Posted on May 9, 2011

0


ಸುಳ್ಯ: ಸುಳ್ಯದ ಕುರುಂಜಿ ವೆಂಕಟ್ರಮಣ ಗೌಡ ವೈದ್ಯಕೀಯ ಕಾಲೇಜು ಆಡಳಿತಾ ಧಿಕಾರಿ ಪ್ರೊ. ರಾಮ ಕೃಷ್ಣ ಅವರ ಹತ್ಯಾ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಡಿಸಿಬಿಐ ಪೊಲೀಸರು ನಿನ್ನೆ ವಶಕ್ಕೆ ತೆಗೆದು ಕೊಂಡಿದ್ದಾರೆ. ಕಳೆದ ಎಪ್ರಿಲ್ ೨೮ರಂದು ರಾತ್ರಿ ತಮ್ಮ ಮಗನೊಂದಿಗೆ ಮನೆ ಸಮೀಪದ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ತಲವಾರಿನಿಂದ ಕಡಿದು ಹತ್ಯೆ ನಡೆಸಿ ಪರಾರಿಯಾಗಿದ್ದರು. ಆರಂಭದಲ್ಲಿ ಕಾಲೇಜಿನ ಸೀಟ್ ವಿಚಾರಕ್ಕೆ ಸಂಬಂಧಿಸಿ ಕೃತ್ಯ ನಡೆದಿದೆ ಎನ್ನಲಾಗಿದ್ದರೂ ಇದರ ಹಿಂದೆ ಕಾಲೇಜಿನ ಆಡಳಿತ ವಿಚಾರಕ್ಕೆ ಸಂಬಂಧಪಟ್ಟ ಕಲಹ ಇರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿತ್ತು. ಸುಳ್ಯ ಶಿಕ್ಷಣ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ರಾಮಕೃಷ್ಣ ಅವರು ತಮ್ಮ ನಿಷ್ಪಕ್ಷಪಾತಿ ಧೋರಣೆಯಿಂದ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಪುತ್ತೂರು ಎಎಸ್‌ಪಿ ರೋಹಿಣಿ ಕ್ವಟೋಚ್ ಮಾರ್ಗದರ್ಶನದಲ್ಲಿ ತನಿಖೆ ಪ್ರಾರಂಭವಾಗಿದ್ದು, ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗುತ್ತಿದೆ. ಮೂರನೇ ಪುಟಕ್ಕೆ

Posted in: Special Report