ಯಡಿಯೂರಪ್ಪ ಸೀಟು ಉಳಿಸಿಕೊಳ್ಳಲಿ: ರೇವಣ್ಣ

Posted on May 9, 2011

0


ಬೆಂಗಳೂರು: ಅಸ್ತಿತ್ವ ಉಳಿಸಿ ಕೊಳ್ಳಲು ಜೆಡಿಎಸ್ ಜನಾಂದೋಲನ ಯಾತ್ರೆಯನ್ನು ನಡೆಸುತ್ತಿದೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿ ಸಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ರೇವಣ್ಣ, ಯಡ್ಡಿ ಮೊದಲು ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲಿ ಎಂದು ಸವಾಲೆಸೆದಿ ದ್ದಾರೆ.

ನಮ್ಮ ವಿರುದ್ಧ ಹೇಳಿಕೆ ನೀಡುವ ಮೊದಲು ಮುಖ್ಯಮಂತ್ರಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲಿ. ಬಿಜೆಪಿ ಸರಕಾ ರದ ಭ್ರಷ್ಟಾಚಾರ ವಿರುದ್ಧ ಜನಾಂ ದೋಲನ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ರೇವಣ್ಣ ಮಾತನಾಡಿದರು.

ನಮ್ಮ ಅಸ್ತಿತ್ವದ ಬಗ್ಗೆ ಸಿಎಂ ಹೇಳುವ ಅಗತ್ಯವಿಲ್ಲ. ರಾಜಕೀಯ ಅಸ್ತಿತ್ವವೇ ಕೊನೆಯಾಯಿತು ಎನ್ನುತ್ತಿದ್ದ ಕಾಲದಲ್ಲಿ ರಾಜ್ಯದ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿಯಾಗಿ ದೇವೇಗೌಡರು ಆಡಳಿತ ನಡೆಸಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದರು.

Posted in: Special Report