ಪತ್ನಿ ಆತ್ಮಹತ್ಯೆ ಸುದ್ದಿ ತಿಳಿದು ಪತಿ ಆತ್ಮಹತ ್ಯೆಗೆ ಯತ್ನ

Posted on May 9, 2011

0


ಕಾರ್ಕಳ: ಪತ್ನಿ ಆತ್ಮಹತ್ಯೆ ಮಾಡಿಕೊಂ ಡಿರುವುದನ್ನು ನೋಡಿದ ಆಕೆ ಗಂಡನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಿಂಜೂರು ಗ್ರಾಮದಲ್ಲಿ ನಡೆದಿದೆ.

ನಿನ್ನೆ ಬೆಳಗ್ಗಿನಿಂದ ಎಲ್ಲರೊಂದಿಗೆ ಮಾತ ನಾಡುತ್ತಾ ಎಂದಿನಂತೆ ಇದ್ದ ದಿವ್ಯಾ ಶೆಟ್ಟಿ (೨೦) ಮಧ್ಯಾಹ್ನ ವೇಳೆ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದರು. ಮಗು ಕೂಗುತ್ತಿದ್ದುದನ್ನು ಕಂಡು ಸ್ಥಳೀಯರು ಮನೆ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ದಿವ್ಯಾ ಶೆಟ್ಟಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ವನ್ನು ಕೆಲಸಕ್ಕೆ ತೆರಳಿದ್ದ ಪತಿ ಪ್ರಶಾಂತ್ ಶೆಟ್ಟಿಗೆ ತಿಳಿಸಲಾಗಿತ್ತು. ಕೂಡಲೇ ಮನೆಗೆ ಧಾವಿಸಿದ ಅವರು ಪತ್ನಿ ಶವ ನೇತಾಡುತ್ತಿರು ವುದನ್ನು ಕಂಡು ಸಹಿಸಲಾರದೆ ಕೀಟನಾಶಕ ವನ್ನು ಕುಡಿದಿದ್ದು, ಇದರಿಂದ ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ವರ್ಷದ ಹಿಂದೆ ಇವರ ವಿವಾಹ ನಡೆದಿತ್ತು.

Posted in: Special Report