ಪಂಜಾಬ್ ವಿರುದ್ಧ ಪುಣೆಗೆ ಜಯ

Posted on May 9, 2011

0


ಮೊಹಾಲಿ: ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದ ಪುಣೆ ವಾರಿಯರ‍್ಸ್ ಬೌಲರ್‌ಗಳ ಸಾಂಘಿಕ ನಿರ್ವಹಣೆಯಿಂದ ಪಂಜಾಬ್ ಕಿಂಗ್ಸ್ ಇಲೆವೆನ್ ವಿರುದ್ಧ ಐದು ವಿಕೆಟ್‌ಗಳ ಜಯ ದಾಖಲಿದೆ. ಈ ಮೂಲಕ ಸತತ ಏಳು ಸೋಲಿನ ನಂತರ ಮೊದಲ ಬಾರಿಗೆ ಗೆಲುವು ಕಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಪಂಜಾಬ್ ನಿಗದಿತ ೨೦ ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ೧೧೯ ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಪುಣೆ ೧೭.೧ ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ ೧೨೦ ರನ್ ದಾಖಲಿಸಿ ಗೆಲುವು ಕಂಡಿತು. ೩೨ ರನ್ ಗಳಿಸಿದ್ದ ಸಂದರ್ಭ ಜೆಸ್ಸಿ ರೈಡರ್ (೧೫) ವಿಕೆಟ್ ಕಳೆದುಕೊಂಡ ನಂತರ ಉತ್ತಪ್ಪ ಹಾಗೂ ಮನೀಶ್ ಎರಡನೇ ವಿಕೆಟ್‌ಗೆ ೩೭ ರನ್‌ಗಳ ಜೊತೆಯಾಟ ನಡೆಸಿಕೊಟ್ಟರು. ಈ ವೇಳೆ ಉತ್ತಪ್ಪ (೨೨) ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಕಳೆದುಕೊಂಡರು. ಮನೀಶ್ (೨೮) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಈ ವೇಳೆ ಜೊತೆಗೂಡಿದ ಯುವರಾಜ್ ಹಾಗೂ ಫರ್ಗಿಸನ್ ಜೋಡಿ ಕೇವಲ ೩.೨ ಓವರ್‌ಗಳಲ್ಲಿ ೩೨ ರನ್ ಕಲೆಹಾಕಿ ತಂಡವನ್ನು ಜಯದ ಬಾಗಿಲಿಗೆ ತಂದು ನಿಲ್ಲಿಸಿದರು. ಯುವರಾಜ್ ೧೫ ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸ್ ನೆರಿವಿನಿಂದ ೩೫ ರನ್ ದಾಖಲಿಸಿದ್ದರು. ಶ್ರೀವಾಸ್ತವ್ ಎರಡು ವಿಕೆಟ್ ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ್ದ ಪಂಜಾಬ್ ಆಂಡಮ್ ಗಿಲ್‌ಕ್ರಿಸ್ಟ್ (೩) ವಿಕೆಟ್ ಅನ್ನು ಬೇಗನೇ ಕಳೆದುಕೊಂಡರೂ ಮತ್ತೊಬ್ಬ ಆರಂಭಿಕ ವಲ್ಥಟಿ (೨೩) ನಂತರ ಬಂದ ಮಾರ್ಶ್ (೩೨), ಕಾರ್ತಿಕ್ (೩೦) ಕೆಲ ಹೊತ್ತು ಕ್ರೀಸ್‌ನಲ್ಲಿದ್ದು ತಂಡಕ್ಕೆ ಆಧಾರವಾಗಿ ನಿಂತಿದ್ದರು. ಆದರೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಗೊಳ್ಳುವಲ್ಲಿ ಮೂವರೂ ವಿಫಲತೆ ಕಂಡರು. ಮಧ್ಯಮ ಕ್ರಮಾಂಕದಲ್ಲಿ ಹಸ್ಸಿ (೪) ಹಾಗೂ ಮಂದಿಪ್ (೬) ಕೂಡ ವಿಫಲಗೊಂಡಿದ್ದು ತಂಡದ ದೊಡ್ಡ ಮೊತ್ತಕ್ಕೆ ಕಡಿವಾಣ ಬಿದ್ದಂತಾಯಿತು. ಕೆಳ ಕ್ರಮಾಂಕ ಕೂಡ ರನ್ ಗಳಿಸಲು ಪರಾದಾಡಿದರು. ರಾಹುಲ್ ಹಾಗೂ ಕುಮಾರ್ ಎರಡು ವಿಕೆಟ್ ಪಡೆದರು.

Posted in: Sports News