ಠೇವಣಿ ಹೆಸರಿನಲ್ಲಿ ಭಾರೀ ಕೋಟಿ ರೂ. ವಂಚನೆ ಒರ್ವ ಸೆರೆ, ಪ್ರಮುಖ ಆರೋಪಿ ನಾಪತ್ತೆ, ದಾಖಲೆ ಪತ್ರ ವಶ

Posted on May 9, 2011

0


ಮಂಗಳೂರು: ಠೇವಣಿ ಯೋಜನೆಯ ಹೆಸರಿನಲ್ಲಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಹಲವರಿಂದ ೫೦೦ ಕೋಟಿ ರೂ. ಸಂಗ್ರಹಿಸಿ ಭಾರೀ ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಕಣ್ಣೂರು ಧರ್ಮಡದ ಕಳಕ್ಕಿಯಲ್ ಬಾಲಕೃಷ್ಣನ್ ೪೦ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈತನ ಮನೆಗೆ ದಾಳಿ ನಡೆಸಿದ ಪೊಲೀಸರು ೪೫ ಲಕ್ಷ ರೂ.ಗಳ ಆರ್ಥಿಕ ವಹಿವಾಟು ಹೊಂದಿದ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಧಾನ ಸೂತ್ರಧಾರ ಪಯ್ಯನ್ನೂರು ಮಂಬಲಂಕಾನಂ ರಸ್ತೆಯ ಕೆ. ಬಾಬು ೨೪ ಎಂಬಾತನ ನಿವಾಸಕ್ಕೂ ದಾಳಿ ನಡೆಸಿ ಒಂದು ಕೋಟಿ ರೂ.ಗಳ ವಹಿವಾಟು ಹೊಂದಿದ ಹಲವು ಮಹತ್ತರ ದಾಖಲೆಗಳು, ಕಂಪ್ಯೂಟರ್ ಮತ್ತಿತರ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಪ್ರಮುಖ ಆರೋಪಿ ಬಾಬು ತಲೆ ಮರೆಸಿಕೊಂಡಿದ್ದಾನೆ. ಒಂದು ವರ್ಷದ ಹಿಂದೆ ಈ ವಂಚನಾ ಜಾಲದ ಪ್ರಧಾನ ಸೂತ್ರಧಾರ ಬಾಬುರಾಜ್ ನಕಲಿ ಆರ್ಥಿಕ ಸಂಸ್ಥೆಯನ್ನು ಆರಂಭಿಸಿದ್ದು, ಠೇವಣಿ ರೂಪದಲ್ಲಿ ೫೦೦ ಕೋಟಿ ರೂ. ಸಂಗ್ರಹಿಸಿದ್ದಾನೆಂದು ಹೇಳಲಾಗಿದೆ.

Posted in: Special Report