ಕುತ್ಯಾರು ಅತಿರುದ್ರಯಾಗಕ್ಕೆ ಯಡಿಯೂರಪ್ಪ

Posted on May 9, 2011

0


ಮಂಗಳೂರು: ಪಡುಬಿದ್ರಿ ಸಮೀಪದ ಕುತ್ಯಾರು ಎಂಬಲ್ಲಿ ಉಡುಪಿ ಮತ್ತು ಮಂಗಳೂರು ಬಿಜೆಪಿ ಸಾರಥ್ಯದಲ್ಲಿ, ವಿವಾದಾಸ್ಪದ ಕೈಗಾ ರಿಕೆಗಳ ಸಹಕಾರದಿಂದ ನಡೆಯುತ್ತಿದೆ ಎನ್ನಲಾದ ಅತಿರುದ್ರಯಾಗಕ್ಕೆ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂ ರಪ್ಪ ಇಂದು ಬೆಳಿಗ್ಗೆ ೭ ಗಂಟೆಗೆ ಆಗ ಮಿಸಲಿ ದ್ದಾರೆಂದು ತಿಳಿದು ಬಂದಿದೆ.

ಮುಖ್ಯಮಂತ್ರಿಗಳೊಂದಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ವಿ.ಎಸ್ ಆಚಾರ್ಯ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆ ಮಾರ್ ಸಹಿತ ಅವಿಭಜಿತ ಜಿಲ್ಲೆಯ ಶಾಸಕರೂ ಆಗಮಿಸುವ ನಿರೀಕ್ಷೆ ಇದೆ.

ಈ ನಡುವೆ ಜಿಲ್ಲೆಗಾಗಮಿಸು ತ್ತಿರುವ ಮುಖ್ಯಮಂತ್ರಿಗಳೊಂದಿಗೆ ವಿವಾದಿತ ಉಡುಪಿ ಪವರ್ ಕಾರ್ಪೊರೇಶನ್ ಉಷ್ಣ ವಿದ್ಯುತ್ ಸ್ಥಾವರವನ್ನು ವಿರೋಧಿಸುತ್ತಿರುವ ವಿವಿಧ ಸಂಘಟನೆಗಳು ಮಾತುಕತೆ ವಿಚಾರ ವಿಮರ್ಶೆಗಾಗಿ ಪ್ರಯತ್ನಿಸುತ್ತಿವೆ ಎಂದು ತಿಳಿದು ಬಂದಿದೆ. ಆದರೆ ಪೊಲೀಸ್ ಮೂಲವೊಂದರ ಪ್ರಕಾರ ವಿವಿಧ ಸಂಘಟನೆಗಳ ಐದಾರು ಮಂದಿಯ ಸಂಯುಕ್ತ ನಿಯೋಗಕ್ಕೆ ಉಡುಪಿಯ ಪ್ರವಾಸಿ ಮಂದಿರದಲ್ಲಿ ಮಾತುಕತೆಗೆ ಅವಕಾಶ ಏರ್ಪಡಿಸಲು ಪ್ರಯತ್ನಿಸಲಾಯಿತಾದರೂ ಸಂಘ ಟನೆಗಳ ಪ್ರಮುಖರಿಂದ ಅದಕ್ಕೆ ಸಕಾ ರಾತ್ಮಕ ಸ್ಪಂದನೆ ದೊರಕಿಲ್ಲವೆನ್ನಲಾಗಿದೆ.

ಮಾತುಕತೆ ಏನಿದ್ದರೂ ವಿವಾದಿತ ಸ್ಥಾವರದ ಸುತ್ತಮುತ್ತಲಿನ ಗ್ರಾಮಗಳ ಪ್ರತ್ಯಕ್ಷ ದರ್ಶನ ಮತ್ತು ಸಂತ್ರಸ್ತರ ಭೇಟಿಯ ನಂತರ ಯೋಜನಾ ಪ್ರದೇಶ ದಲ್ಲೇ ನಡೆಯಬೇಕೆಂಬುದು ಸಂಘಟನೆ ಗಳ ಪ್ರಮುಖರ ಅದರಲ್ಲೂ ರಾಜ್ಯ ರೈತ ಸಂಘದ ನಿಲುವಾಗಿದೆ ಎಂದು ಸಂಘದ ಪದಾಧಿಕಾರಿಯೋರ್ವರು ಪತ್ರಿಕೆಗೆ ತಿಳಿಸಿದ್ದಾರೆ.

ಯಾಗ ನಡೆಯುತ್ತಿರುವ ಕುತ್ಯಾರು ಗುಡ್ಡೆ ಯುಪಿಸಿಎಲ್ ಸ್ಥಾವರದಿಂದ ಅನತಿ ದೂರದಲ್ಲಿದೆ ಮತ್ತು ಇಲ್ಲಿಗೆ ತಲುಪಲು ಕಾಪು ಮತ್ತು ಪಡುಬಿದ್ರಿ ಹೆದ್ದಾರಿ ಮುಖ್ಯ ಮಾರ್ಗವಾಗಿದೆ. ಮುಖ್ಯಮಂತ್ರಿಯವರ ಭೇಟಿಯ ಹಿನ್ನೆಲೆ ಯಲ್ಲಿ ಈ ಪರಿಸರದಾದ್ಯಂತ ಅತ್ಯಂತ ಬಿಗು ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಇಂಟರ್ ಸೆಪ್ಟರ್ ವಾಹನಗಳು, ಹೊಯ್ಸಳ ಜೀಪುಗಳೊಂ ದಿಗೆ ಉಡುಪಿ ಮತ್ತು ಕಾರ್ಕಳ ಉಪವಿ ಭಾಗಗಳ

Posted in: Special Report