‘ಗಾಣವಿಲೋಲ ಕಲಾ ಸಂಗಮ’ ಮಕ್ಕಳನ್ನು ಕಲಾವಿದರಾಗ ಿ ರೂಪಿಸಿಸುತ್ತಿರುವ ಕಲಾ ಶಾಲೆ ಶ್ರೀ ಸರ್ವಶಕ್ತಿ ಮೂ ಕಾಂಬಿಕಾ ಸನ್ನಿಧಿ, ಕಡೇಶಿವಾಲಯದ ಆಡಳಿತ ಮೊಕ್ತೇಸರರ ಾದ ಕೃಷ್ಣಪ್ಪ ಕೆ. ಕಡೇ ಶಿವಾಲಯ ಅವರು ಎಳೆಯ ಪ್ರಾಯದ ಲ ್ಲಿಯೇ, ಮಕ್ಕಳನ್ನು ಕಲಾವಿದರಾಗಿ ರೂಪಿಸಬೇಕೆಂಬ ಧ್ಯ ೇಯ. ಉದ್ದೇಶ ದಿಂದ,

Posted on May 9, 2011

0


ಬಿ ಸ್ವತ: ತಾನು ಕಲಾವಿದನಾಗಿ ಪಟ್ಟ ಪರಿಶ್ರಮದಿಂದ ‘ಗಾಣವಿಲೋಲ ಕಲಾ ಸಂಗಮ’ದ ಮೂಲಕ ಮಕ್ಕಳಿಗೆ ಧಾರೆಯೆರೆಯುತ್ತಿದ್ದಾರೆ. ಇಂದಿನ ಸಮಾಜದಲ್ಲಿ ಎಳೆಯ ಪ್ರಾಯದಲ್ಲೇ ಮಕ್ಕಳನ್ನು ಕಲಾವಿದರನ್ನಾಗಿ ರೂಪಿಸುತ್ತಿರುವ ಇವರ ಸಾಧನೆ ಕಲಾ ಪ್ರೇಮಿಗಳಿಗೆ ಹೆಮ್ಮೆಯ ವಿಷಯವೂ ಹೌದು.

ಈ ಗಾಣವಿಲೋಲ ಕಲಾ ಸಂಗಮ ಕಡೇಶಿವಾಲಯ ಆರಂಭ ವಾದ ದಿನ ಅತ್ಯಲ್ಪ. ಆದರೆ ಸಾದನೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅನನ್ಯ ಎಂದರೂ ತಪ್ಪಾಗಲಿಕ್ಕಿಲ್ಲ. ಇದು ಒಂದು ಕಲಾವಿದರ ಕಲಾಸಂಗಮ ಇನ್ನೂ ಬಾಲ್ಯವಾಸ್ಥೆಯ ಕೂಸು, ಸ್ಥಾಪ ಕಾಧ್ಯಕ್ಷರಾಗಿರುವ ಕೃಷ್ಣಪ್ಪ ಕುಲಾಲರು ತಮ್ಮ ವೃತ್ತಿಜೀವನದಲ್ಲಿ ನಡೆದು ಬಂದ ದಾರಿ, ಕಲಾಜೀವನದ ಸಂಪಾದನೆ ಯನ್ನು ತನ್ನ ಗಾಣವಿಲೋಲ ಕಲಾ ಸಂಗಮಕ್ಕೆ ವಿನಿಯೋಗಿಸಿ ಈ ಮಟ್ಟಕ್ಕೆ ಬೆಳೆಸಿದ್ದಾರೆ. ಈ ಕಲಾವಿದರ ತಂಡದ ಅತ್ಯಂತ ಮೋಹಕ ನೃತ್ಯ ಅಭಿನಯ ಕಲಾಪ್ರೇಮಿಗಳ ಜನಮನಸೂರೆ ಗೊಂಡಿದೆ, ಇವರ ಪ್ರದರ್ಶನಕ್ಕೆ ಈಗಾಗಲೇ ಹಲವಾರು ಬಹುಮಾನ, ಪ್ರಶಸ್ತಿಗಳು ಸಂದಿವೆ.

ತಂಡದ ಕಲಾವಿದರನ್ನು ರಾಷ್ಟ್ರ ಮಟ್ಟದಲ್ಲಿ ಕಲಾಪ್ರೇಮಿಗಳು ಗುರುತಿ ಸಬೇಕು ಎಂಬ ಆಶಾಭಾವನೆ ಯನ್ನು ಸಂಚಾಲಕರಾದ ಉದಯ ಶಂಕರ ಕಡೇ ಶಿವಾಲಯ ಹೊಂದಿದ್ದಾರೆ.

ವಾರಕೊಮ್ಮೆ ತರಬೇತಿ ನೀಡು ತ್ತಿರುವ ಈ ಕಲಾ ಶಾಲೆಯಲ್ಲಿ ಮುಂದಿನ ದಿನಗಳಲ್ಲಿ, ದಿನಂಪ್ರತಿ ತರ ಬೇತಿ ಕೊಟ್ಟು ರಾಷ್ಟ್ರಮಟ್ಟದಲ್ಲಿ ಸಿದ್ಧ ಗೊಳಿಸುವ ಪೂರ್ವ ತಯಾರಿ ನಡೆಯು ತ್ತಿದೆ. ಆದಕ್ಕಾಗಿ ಸ್ವಂತ ವೇದಿಕೆ, ರಂಗಾ ಲಂಕಾರ, ವಿದ್ಯುದೀಪ ವ್ಯವಸ್ಥೆ, ವಸ್ತ್ರಾ ಭರಣಗಳು ನಮ್ಮಲ್ಲಿದ್ದು, ಪೂರ್ಣ ಮಟ್ಟದ ಸಲಕರಣೆಗಳ ತಯಾರಿ ನಡೆಸುತ್ತಿದ್ದೇವೆ ಎಂದು ಹೇಳುತ್ತಾರೆ ಉದಯ ಶಂಕರ್ ಅವರು.

ಶಶಿಧರ ಕೆ., ಮಡಂತ್ಯಾರು

Advertisements
Posted in: Special Report