ಶಿಕ್ಷಕಿಯರ ಸಾಮೂಹಿಕ ರಾಜೀನಾಮೆ ಆಡಳಿತ ಮಂಡಳಿ ಕ ಿರುಕುಳ ಕಾರಣ?

Posted on May 9, 2011

0


ಮಂಗಳೂರು: ಪ್ರತಿಷ್ಟಿತ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರ ಧೋರಣೆಯನ್ನು ಖಂಡಿಸಿ ಶಿಕ್ಷಕಿಯರು ಸಾಮೂಹಿಕವಾಗಿ ರಾಜೀನಾಮೆ ನೀಡಿರುವ ಪ್ರಕರಣವೊಂದು ಮುಡಿಪುವಿನಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿ ಎಂಟು ವರ್ಷಗಳ ಹಿಂದೆ ಖಾಸಗಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯೊಂದು ಸ್ಥಾಪನೆಗೊಂಡಿತ್ತು. ಇದರಲ್ಲಿ ೧೫ಕ್ಕೂ ಹೆಚ್ಚು ಶಿಕ್ಷಕಿಯರು ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದರು. ಇವರ ಜವಾಬ್ದಾರಿಯುತ ಸೇವೆಯ ಫಲವಾಗಿ ಶಾಲೆಯು ಉತ್ತಮ ಹೆಸರನ್ನೂ ಪಡೆದಿತ್ತು.

ಇದನ್ನೇ ಕ್ರೆಡಿಟ್ ಆಗಿ ಬಳಸಿಕೊಂಡ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯೊಂದು ನಾಲ್ಕು ವರ್ಷಗಳ ಹಿಂದೆ ಶಾಲೆಯನ್ನು ಖರೀದಿಸಿದ್ದ ಕಾರಣ ಆಡಳಿತ ಮಂಡಳಿಯೂ ಬದಲಾಗಿತ್ತು. ಇದರ ಜೊತೆಗೆ ಹಿಂದೆ ಇದ್ದ ವಾತಾವರಣವೂ ಬದಲಾಗುತ್ತಾ ಹೋಯಿತು ಎನ್ನಲಾಗಿದೆ. ಪ್ರಾಂಶುಪಾಲರು ದಿನಕ್ಕೊಂದು ನಿಯಮವನ್ನು ಜಾರಿಗೆ ತಂದು ಅದನ್ನು ಶಿಕ್ಷಕಿಯರ ಮೇಲೆ ಹೇರುತ್ತಿದ್ದರು. ಇದರ ಜೊತೆ ಮಾನಸಿಕವಾಗಿಯೂ ಕಿರುಕುಳ ನೀಡುತ್ತಿದ್ದರು ಎನ್ನುವ ಮಾಹಿತಿ ಲಭಿಸಿದೆ.

ಇದರಿಂದ ಬೇಸತ್ತ ಶಿಕ್ಷಕಿಯರು ಹಲವು ಬಾರಿ ಅಧ್ಯಕ್ಷರಿಗೆ ದೂರು ನೀಡಿದರೂ ಅವರ ದೂರನ್ನು ಕಿವಿಗೆ ಹಾಕಿಕೊಳ್ಳದ ಅಧ್ಯಕ್ಷರು ಪ್ರಾಂಶು ಪಾಲರ ಮಾತಿಗೆ ತಲೆಯಾಡಿಸುತ್ತಾ ಬಂದಿದ್ದರು ಎನ್ನಲಾಗಿದೆ. ಇದರಿಂದಾಗಿ ಶಾಲೆಯಲ್ಲಿ ಪ್ರಾಂಶಪಾಲರ ಸರ್ವಾಧಿಕಾರಿ ಧೋರಣೆ ನಡೆಯುತ್ತಿತ್ತು ಎನ್ನಲಾಗಿದೆ. ಇದೆಲ್ಲವನ್ನೂ ಸಹಿಸಿಕೊಂಡು ಬಂದಿದ್ದ ೧೫ ಮಂದಿ ಶಿಕ್ಷಕಿಯರು ಶಾಲೆಯ ಪರೀಕ್ಷೆ ಮುಗಿದು ರಜೆ ಸಿಕ್ಕಿದ ಕೂಡಲೇ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿ ಶಾಲೆಗೆ ಗುಡ್‌ಬೈ ಹೇಳಿ ಹೊರ ಬಂದಿದ್ದಾರೆ ಎನ್ನುವ ಮಾಹಿತಿ ಪತ್ರಿಕೆಗೆ ಲಭಿಸಿದೆ. ಮೂರನೇ ಪುಟಕ್ಕೆ

Advertisements
Posted in: Special Report