ಯುವತಿಗೆ ವಂಚನೆ: ಕೈಚೆಲ್ಲಿದ ಪೊಲೀಸರು

Posted on May 9, 2011

0


ಮಂಗಳೂರು: ಪ್ರೀತಿಸಿದ ಹುಡುಗಿಗೆ ವಂಚಿಸಿ ಬೇರೊಂದು ಮದುವೆಗೆ ಸಿದ್ಧತೆ ನಡೆಸುತ್ತಿರುವ ಪ್ರಕರಣ ಒಂದು ಉಡುಪಿಯ ಕಟಪಾಡಿ-ಮಟ್ಟು ಎಂಬಲ್ಲಿ ನಡೆದಿದ್ದು, ವಂಚನೆಗೊಳಗಾದ ಯುವತಿಯ ಬಳಿ ಸಾಕ್ಷ್ಯ ಇಲ್ಲದಿರುವುದರಿಂದ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಕೈಚೆಲ್ಲಿದ್ದರೆ, ಯುವತಿ ಸ್ಥಳೀಯ ಸಂಘಟನೆಯ ಮೊರೆ ಹೋಗಿದ್ದಾಳೆ.

ಕಟಪಾಡಿ ಸಮೀಪದ ಮಟ್ಟು ಗ್ರಾಮದ ಗೀತಾ ಎಂಬಾಕೆಯನ್ನು ಉದ್ಯಾವರದ ಪುಷ್ಪರಾಜ್ ಎಂಬಾತ ಕಳೆದ ೧೫ ವರ್ಷಗಳಿಂದ ಪ್ರೀತಿಸುತ್ತಿದ್ದನೆನ್ನಲಾಗಿದ್ದು, ಮದುವೆಯಾಗುವ ಭರವಸೆ ನೀಡಿದ ದೈಹಿಕ ಸಂಬಂಧವನ್ನೂ ಬೆಳೆಸಿದ್ದ. ಈಗ ಪ್ರೀತಿಸಿದವಳನ್ನು ತಿರಸ್ಕರಿಸಿರುವ ಪುಷ್ಪರಾಜ್ ಬ್ರಹ್ಮಾವರ ಇನ್ನೊರ್ವ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿ ದ್ದಾನೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ಗೀತಾಳ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಪೊಲೀಸರು ಸಹಾಯ ಮಾಡಲು ನಿರಾಕರಿಸಿದಾಗ ಯುವತಿ ಸ್ಥಳೀಯ ಯುವಕರ ಸಂಘಟನೆ ಮೊರೆ ಹೋಗಿದ್ದು ಅವರು ಮಾನವೀಯ ನೆಲೆಯಲ್ಲಿ ನ್ಯಾಯ ಒದಗಿಸಲು ಮುಂದಾಗಿದ್ದಾರೆ.

Advertisements
Posted in: Special Report