ಯುಪಿಸಿಎಲ್ ಸಭೆಯಲ್ಲಿ ಸ್ಥಾವರ ವಿರೋಧಿ ನಾಯಕರು!

Posted on May 9, 2011

0


ಮಂಗಳೂರು: ಪಡುಬಿದ್ರಿ ಸಮೀಪದ ಎಲ್ಲೂರಿನಲ್ಲಿ ಕಾರ್ಯಾರಂಭ ಮಾಡಿರುವ ವಿವಾದಿತ ಯುಪಿಸಿಎಲ್ ಉಷ್ಣವಿದ್ಯುತ್ ಸ್ಥಾವರವನ್ನು ನಿರ್ಣಯಗಳ ಮೂಲಕ ವಿರೋಧಿಸಿದ್ದ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರುಗಳೇ, ಕಂಪೆನಿ ಏರ್ಪಡಿಸಿದ ಸಂತ್ರಸ್ತ ಗ್ರಾಮಗಳ ಆರೋಗ್ಯ ತಪಾಸಣಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಭಾಷಣ ಬಿಗಿದ ಘಟನೆ ಇನ್ನಾ ಎಂಬ ಸಂತ್ರಸ್ತ ಗ್ರಾಮದಲ್ಲಿ ಮೊನ್ನೆ ನಡೆದಿದೆ.

ಇನ್ನಾ ಗ್ರಾಮದ ಶಾಲೆಯೊಂದರಲ್ಲಿ ಸ್ಥಳೀಯ ಅಂಗವಿಕಲರಿಗೆ ಕೃತಕ ಅಂಗಾಂಗ ವಿತರಿಸಲು ಮತ್ತು ಆರ್ಥಿಕವಾಗಿ ಹಿಂದುಳಿದ ವರಿಗೆ ವಿವಿಧ ಸವಲತ್ತು ಒದಗಿಸಲೆಂದು ಯುಪಿಸಿಎಲ್‌ನ ಮಾತೃ ಸಂಸ್ಥೆ ಲ್ಯಾಂಕೋ ಫೌಂಡೇಶನ್ ವತಿಯಿಂದ ಈ ಸಭೆ ಏರ್ಪಡಿ ಸಲಾಗಿತ್ತು.

ಕಂಪೆನಿ ವತಿಯಿಂದ ಅದರ ಅಧಿಕಾರಿ ಗಳಾದ ಇನ್ನಾ ಸುದರ್ಶನ್ ಮತ್ತು ಗೋವಿಂದನ್ ಎಂಬವರು ಭಾಗವಹಿಸಿದ್ದರು. ಯೋಜನಾ ವಿರೋಧಿಗಳೆನ್ನಲಾದ ಇನ್ನಾ ಪಂಚಾಯತ್ ಅಧ್ಯಕ್ಷೆ ರೇಶ್ಮಾ ಉದಯ ಕುಮಾರ್ ಮತ್ತು ಬೆಳ್ಮಣ್ ಪಂ. ಅಧ್ಯಕ್ಷೆ ಮಲ್ಲಿಕಾ ಭಟ್ ಮೂರನೇ ಪುಟಕ್ಕೆ

Advertisements
Posted in: Special Report