ಮಲೇಶಿಯನ್ ಓಪನ್ ಬ್ಯಾಡ್ಮಿಂಟನ್ ಫೈನಲ್ನಲ್ಲಿ ಮ ುಗ್ಗರಿಸಿದ ಸೈನಾ

Posted on May 9, 2011

0


ಕ್ವಾಲಾಲಂಪುರ್: ಇಲ್ಲಿ ನಡೆದ ಮಲೇಶಿಯನ್ ಓಪನ್ ಗ್ರ್ಯಾಂಡ್ ಫ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್‌ನ ಫೈನಲ್‌ನಲ್ಲಿ ಚೀನಾದ ಝಿನ್ ವಾಂಗ್ ವಿರುದ್ಧ ಭಾರತದ ಸೈನಾ ನೆಹ್ವಾಲ್ ಸೋಲುವ ಮೂಲಕ ಕಪ್ ಗೆಲ್ಲುವ ಸುವರ್ಣಾವಕಾಶವನ್ನು ತಪ್ಪಿಸಿಕೊಂಡರು. ವಿಶ್ವದ ಮೂರನೇ ಶ್ರೇಯಾಂಕದ ಝಿನ್ ವಿರುದ್ಧ ಸೈನಾ ೨೧-೧೩, ೮-೨೧, ಹಾಗೂ ೧೪-೨೧ರ ಅಂತರದಲ್ಲಿ ಸೋಲನ್ನು ಅನುಭವಿಸಿದರು. ೨೧ರ ಹರೆಯದ ಸೈನಾ ಮೊದಲ ಸೆಟ್ ಅನ್ನು ಭರ್ಜರಿಯಾಗಿ ಗೆದ್ದರೂ ನಂತರದೆರಡು ಸೆಟ್‌ನಲ್ಲಿ ನೀರಸ ಪ್ರದರ್ಶನ ನೀಡಿ ಪ್ರಶಸ್ತಿ ವಂಚಿತರಾದರು.

Advertisements
Posted in: Special Report