ಭಾರತದ ಮೇಲೆ ದಾಳಿಗೆ ನೆರವಾಗುತ್ತಿದ್ದ ಐಎಸ್ಐ

Posted on May 9, 2011

0


ವಾಷಿಂಗ್ಟನ್: ಪಾಕಿಸ್ತಾನದ ಸೇನೆ ಆಯ್ಕೆ ಮಾಡಿದಂತಹ ಸ್ಥಳಗಳ ಮೇಲೆ ದಾಳಿ ಮಾಡಲು ಉಗ್ರರನ್ನು ಭಾರತ ದೊಳಗೆ ನುಸುಳಿಸಲು ಐಎಸ್‌ಐ ಎಲ್ಲಾ ರೀತಿಯ ನೆರವು ನೀಡುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿರುವು ದಾಗಿ ವಿಕಿಲೀಕ್ಸ್ ಮಾಹಿತಿ ಬಹಿರಂಗ ಗೊಳಿಸಿದೆ.

ಗೌಂಟನ್ಮೊದಲ್ಲಿ ಬಂಧಿತನೊಬ್ಬ ನನ್ನು ವಿಚಾರಣೆಗೆ ಒಳಪಡಿಸಿದಾಗ ಹೊರಬಿದ್ದ ಅಂಶವೆಂದರೆ ಭಾರತ ದೊಳಗೆ ನುಸುಳಲು ಐಎಸ್‌ಐ ಎಲ್ಲಾ ನೆರವು ನೀಡುತ್ತಿತ್ತು. ಉಗ್ರರಿಗೆ ಭಾರತ ದಲ್ಲಿ ಬಾಂಬ್ ದಾಳಿ, ಅಪಹರಣ ಮತ್ತು ಕಾಶ್ಮೀರದಲ್ಲಿ ಜನರನ್ನು ಕೊಲ್ಲಲು ಐಎಸ್‌ಐ ಉಗ್ರರಿಗೆ ನೆರವಾಗುತ್ತಿತ್ತು. ದಾಳಿ ನಡೆಸಬೇಕಾಗಿರುವ ಸ್ಥಳಗಳನ್ನು ಪಾಕ್ ಸೇನೆ ಆಯ್ಕೆ ಮಾಡುತ್ತಿತ್ತು ಎಂದು ವಿಕಿಲೀಕ್ಸ್ ಹೇಳಿದೆ.

ಅಬೋಟಾಬಾದ್‌ನಲ್ಲಿ ಲಾಡೆನ್‌ನ್ನು ಹತ್ಯೆ ಮಾಡಿದ ಬಳಿಕ ಪಾಕಿಸ್ತಾನಕ್ಕೆ ಭಾರೀ ಹಿನ್ನಡೆಯಾಗಿದೆ. ಭಾರತದ ಮೇಲೆ ನಡೆಯುವ ದಾಳಿಗಳಿಗೆ ಉಗ್ರರು ಪಾಕಿಸ್ತಾನದಲ್ಲಿ ನಡೆಸುತ್ತಿರುವ ಶಿಬಿರ ಗಳೇ ಕಾರಣವೆಂದು ಅಮೆರಿಕಾಗೆ ತಿಳಿ ದಿತ್ತು. ಭಾರತದ ಮೇಲೆ ದಾಳಿ ನಡೆ ಸುತ್ತಿರುವ ಲಷ್ಕರ್ ಗುಂಪಿಗೆ ಸೇರಿದ ಹಲವರನ್ನು ಬಂಧಿಸಲಾಗಿದ್ದು, ಇವ ರನ್ನು ವಿಚಾರಣೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ ಮತ್ತು ವಿಚಾ ರಣೆಯ ೭೭೯ ಪುಟಗಳ ವರದಿ ಇದೆ. ಲಷ್ಕರ್‌ನ ಹೆಚ್ಚಿನ ಉಗ್ರರು ಪಾಕ್ ನಲ್ಲಿಯೇ ತರಬೇತಿ ಪಡೆಯುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂ ದಿರುವ ಅಂಶವಾಗಿದೆ ಎಂದು ವಿಕಿ ಲೀಕ್ಸ್ ಮಾಹಿತಿ ನೀಡಿದೆ.

ಪಾಕಿಸ್ತಾನ, ಸೌದಿ ಅರೇಬಿಯಾ, ಅಲ್ಜಿರಿಯಾ ಮತ್ತು ಪಾಕಿಸ್ತಾನದಿಂದ ಬಂಧಿತರಾಗಿರುವವರು ಪಾಕಿಸ್ತಾನದಲ್ಲಿ ಶಸ್ತ್ರಾಸ್ತ ತರಬೇತಿ ಪಡೆದುಕೊಂಡಿರು ವುದಾಗಿ ಒಪ್ಪಿದ್ದಾರೆ. ಭಾರತ ಮತ್ತು ಅಪಘಾನಿಸ್ತಾನದಲ್ಲಿ ದಾಳಿ ನಡೆಸಲು ಪಾಕಿನಲ್ಲಿ ಉಗ್ರರನ್ನು ಸಜ್ಜುಗೊಳಿಸಲಾ ಗುತ್ತಿತ್ತು. ಇದಕ್ಕೆ ಐಎಸ್‌ಐ ಎಲ್ಲಾ ರೀತಿಯ ಸಹಕಾರಗಳನ್ನು ನೀಡುತ್ತಿತ್ತು ಎನ್ನುವುದು ತಿಳಿದುಬಂದಿದೆ.

Advertisements
Posted in: Special Report