ಭಾರತಕ್ಕೆ ನುಸುಳಲು ನೂರು ಉಗ್ರರ ಸಂಚು

Posted on May 9, 2011

0


ನವದೆಹಲಿ: ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಹತ್ಯೆಯ ನಂತರ ಈಗ ಭಾರತದೊಳಗೆ ನುಸುಳಲು ನೂರಕ್ಕೂ ಹೆಚ್ಚಿನ ಉಗ್ರರು ಸಜ್ಜಾಗಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದ್ದು, ಎಲ್ಲಾ ಗಡಿಗಳಲ್ಲಿ ಗರಿಷ್ಠ ಭದ್ರತೆಯನ್ನು ಮಾಡಲಾಗಿದೆ.

ಪಾಕಿಸ್ತಾನ ಕೂಡ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಗಡಿ ನಿಯಂತ್ರಣ ರೇಖೆಯಲ್ಲಿ ಪಹರೆ ಬಿಗುಗೊಳಿಸಿದೆ. ಲಾಡೆನ್ ಹತ್ಯೆಯ ಬಳಿಕ ಅಲ್‌ಖೈದಾ ದಾಳಿ ನಡೆಸುವ ಬಗ್ಗೆ ಸೇನೆಗೆ ಮಾಹಿತಿ ಲಭ್ಯವಾಗಿದೆ.

Advertisements
Posted in: Special Report