ಬಿಎಂಎಸ್ ಯೂನಿಯನ್ನಿಂದ ಪ್ರತಿಭಟನೆ

Posted on May 9, 2011

0


ಮಂಗಳೂರು: ಬಿಎಎಸ್‌ಎಫ್ ಸಂಸ್ಥೆಯ ಬಿಎಂಎಸ್ ಯೂನಿಯನ್ ಕಾರ್ಮಿಕರು ಕಳೆದ ೧೬ ತಿಂಗಳಿನಿಂದ ಬಾಕಿ ಉಳಿದಿರುವ ತಮ್ಮ ವೇತನ ಪರಿಷ್ಕರಣೆ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸುವಂತೆ ಸಂಸ್ಥೆಯ ಆಡಳಿತ ಮಂಡಳಿಯನ್ನು ಒತ್ತಾಯಿಸುತ್ತಿದ್ದು, ಇತ್ತೀಚೆಗೆ ಸಂಸ್ಥೆಯ ಆಡಳಿತ ವರ್ಗದ ಹಠಮಾರಿತನದ ಧೋರಣೆ ಯನ್ನು ವಿರೋಧಿಸಿ ಸಂಸ್ಥೆಯ ಮುಖ್ಯದ್ವಾರದ ಮುಂದೆ ಕರಿಬಾವುಟ ಪ್ರದರ್ಶನ, ಪ್ರತಿಭಟನಾ ಸಭೆ ಇತ್ಯಾ ದಿಗಳನ್ನು ಹಮ್ಮಿಕೊಂಡಿತ್ತು. ಭಾರ ತೀಯ ಮಜ್ದೂರ್ ಸಂಘದ ಜಿಲ್ಲಾ ಧ್ಯಕ್ಷ ವಿಶ್ವನಾಥ ಶೆಟ್ಟಿಯವರು ಪ್ರತಿ ಭಟನಾ ಸಭೆಯನ್ನುದ್ದೇಶಿಸಿ ಮಾತ ನಾಡಿದರು. ಇಲ್ಲಿನ ಆಡಳಿತ ಮಂಡಳಿ ಯು ಕೆಲವರಿಗೆ ಆಮಿಷವೊಡ್ಡಿ ತನ್ನ ಬೇಳೆ ಬೇಯಿಸಿಕೊಳ್ಳುವ ಕುತಂತ್ರವನ್ನು ಖಂಡಿಸಿದ ಇವರು ಯಾವುದೇ ಸಂದರ್ಭದಲ್ಲಿ ನಮ್ಮ ಒಕ್ಕೂಟದ ಬಲ ಪರೀಕ್ಷೆಗೆ ನಾವು ಹಿಂದೇಟು ಹಾಕ ಲಾರೆವು ಹಾಗೂ ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಡುವೆವು ಎಂದು ಆಡಳಿತ ವರ್ಗವನ್ನು ಎಚ್ಚರಿಸಿ ದರು. ಬಿಎಂಎಸ್ ಸಂಘಟನಾ ಕಾರ್ಯದರ್ಶಿ ಮಹೇಶ್ ಶೆಟ್ಟಿ, ಸತೀಶ್ ಮಂಚೂರು, ವಸಂತ್ ಹೊಸಬೆಟ್ಟು ಹಾಗೂ ಬಿಎಎಸ್‌ಎಫ್ ವರ್ಕರ‍್ಸ್ ಯೂನಿಯನ್‌ನ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

Advertisements
Posted in: Special Report