ಫ್ರೆಂಡ್ಸ್ ಮೇಲಂಗಡಿ ಯೂನಿಟಿ ಕಚೇರಿ ಉದ್ಘಾಟನೆ

Posted on May 9, 2011

0


ಮಂಗಳೂರು: ಉಳ್ಳಾಲದಲ್ಲಿ ಕ್ರೀಡೆ ಮತ್ತು ಸಮಾಜಸೇವಾ ಕೆಲಸಗಳಲ್ಲಿ ತ್ವರಿತ ಬೆಳವಣಿಗೆಯನ್ನು ಕಂಡ ಫ್ರೆಂಡ್ಸ್ ಮೇಲಂಗಡಿ ಯೂನಿಟಿ ಸಂಸ್ಥೆಯ ನೂತನ ಕಚೇರಿಯನ್ನು ಕಾಂಗ್ರೆಸ್ಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಫಾರೂಕ್ ಉಳ್ಳಾಲ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಉಳ್ಳಾಲ ಪುರಸಭೆಯ ಅಧ್ಯಕ್ಷ ಬಾಜಿಲ್ ಡಿಸೋಜ, ಜನತಾದಳ ನಾಯಕ ಜೆ. ಮುಹಮ್ಮದ್, ಉಳ್ಳಾಲ ಪುರಸಭೆಯ ಮಾಜಿ ಉಪಾಧ್ಯಕ್ಷ ದಿನೇಶ್ ರೈ ಭಾಗವಹಿಸಿ ಸಂಸ್ಥೆಗೆ ಶುಭಹಾರೈಸಿದರು. ವೇದಿಕೆಯಲ್ಲಿ ಆಶ್ರಯ ಸಮಿತಿಯ ಮಾಜಿ ಅಧ್ಯಕ್ಷ ಯೂಸುಫ್ ಉಳ್ಳಾಲ್, ಹೊಸಪಳ್ಳಿ ಮಸೀದಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಪಲ್ಲಿಖಾನ, ಹಸೈನಾರ್ ಇ.ಜಿ.ಎಸ್ ಉಳ್ಳಾಲ ಹಾಗೂ ಸ್ಥಳೀಯ ಪ್ರಮುಖರು ಉಪಸ್ಠಿತರಿದ್ದರು. ಸಂಸ್ಥೆಯ ಅಧ್ಯಕ್ಷ ಶ್ರೀ ನಝೀರ್ ಬಾರ್ಲಿ ಸ್ವಾಗತಿಸಿದರು. ಶ್ರೀ ಕಬೀರ್ ಬಾವ ಕಾರ್ಯಕ್ರಮ ನಿರೂಪಿಸಿ, ಮಾಲಿಕ್ ಹಮೀದ್ ವಂದಿಸಿದರು.

Advertisements
Posted in: Special Report