ಪುಟ್ಟಪರ್ತಿ ತೊರೆದ ಸತ್ಯಜಿತ್

Posted on May 9, 2011

0


ಪುಟ್ಟಪರ್ತಿ: ಸತ್ಯಸಾಯಿ ಬಾಬಾ ಟ್ರಸ್ಟ್‌ಗೆ ಸಂಬಂಧಿಸಿದ ವಿವಾದಗಳ ಕೇಂದ್ರ ಬಿಂದುವಾಗಿದ್ದ ಸತ್ಯಜಿತ್ ಪುಟ್ಟಪರ್ತಿಯನ್ನೇ ತೊರೆಯುತ್ತಿದ್ದಾರೆ.

ಬಾಬಾ ಆರೋಗ್ಯ ಹಾಗೂ ಆಸ್ತಿ ಕುರಿತಂತೆ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಂದ ಬೇಸತ್ತ ಸತ್ಯಜಿತ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ಹೇಳಿವೆ.

ಕಳೆದ ೧೫ ವರ್ಷಗಳಿಂದ ಬಾಬಾ ಜೊತೆಯಲ್ಲೇ ಇದ್ದ ಸತ್ಯಜಿತ್ ಎಂಬಿಎ ಪದವೀಧರ. ಬಾಬಾ ಸನ್ನಿಧಾನದಲ್ಲೇ ವಿದ್ಯಾಭ್ಯಾಸ ಮುಗಿಸಿರುವ ವ್ಯಕ್ತಿ. ಕೆಲಸಕ್ಕೇ ಸೇರದೆ ಬಾಬಾ ಅವರಿಗಾಗಿಯೇ ಜೀವನ ಮುಡಿಪಾಗಿಟ್ಟು, ಬಾಬಾ ಎಲ್ಲಿಗೆ ಹೋದರೂ ಅಲ್ಲಿ ಹಾಜರಿರುತ್ತಿದ್ದರು. ಇದು ಸತ್ಯಜಿತ್ ಜೀವನ ಕ್ರಮ ಆಗಿತ್ತು. ಬಾಬಾ ಜತೆ ಆತ್ಮೀಯರಾಗಿದ್ದ ಸತ್ಯಜಿತ್ ಇನ್ನು ಮುಂದೆ ಪುಟ್ಟಪರ್ತಿಯಲ್ಲಿರಬಾರದೆಂದು ತೀರ್ಮಾನಿಸಿದ್ದಾರೆ.

ಅಪಪ್ರಚಾರದಿಂದ ನೊಂದಿರುವ ಸತ್ಯಜಿತ್ ಪುಟ್ಟಪರ್ತಿ ತೊರೆಯಲು ಪ್ರಮುಖ ಕಾರಣ. ಇದು ನಂಬಿಕೆ ವಿಚಾರಕ್ಕಿಂತ ಅವರ ಮನಸ್ಸಿಗೆ ಘಾಸಿ ಉಂಟು ಮಾಡುತ್ತಿವೆ ಎನ್ನಲಾಗುತ್ತಿದೆ. ಹೀಗಾಗಿ ತಂದೆ-ತಾಯಿ ಜತೆಯಲ್ಲಿ ಮುಂಬೈನಲ್ಲೇ ವಾಸ ಮಾಡಿಕೊಂಡು ಅಲ್ಲಿರುವ ಸಾಯಿ ಬಾಬಾ ಆಶ್ರಮದಲ್ಲೇ ಇರುವುದಾಗಿ ಸತ್ಯಜಿತ್ ನಿರ್ಧರಿಸಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ. ಅಲ್ಲದೆ ಸೋಮವಾರವೇ ಅವರು ಪುಟ್ಟಪರ್ತಿ ತೊರೆಯಲಿದ್ದಾರೆ ಎಂದು ಮೂಲಗಳು ಹೇಳಿವೆ.

Advertisements
Posted in: Special Report