ಪಚ್ಚನಾಡಿಯಿಂದ ಪಾರಾಗಿ ಬಂದವನ ಕಥೆ-ವ್ಯಥೆ

Posted on May 9, 2011

0


ಮಂಗಳೂರು: ‘ನಿಜ ಹೇಳ್ತೇನೆ. ಇದು ಆಶ್ರಯವಲ್ಲ. ನರಕ ಸ್ವಾಮಿ ನರಕ. ನಾನು ಹುಟ್ಟಿದೂರಲ್ಲೇ ಬೇಡಿಯಾದರೂ ಬದುಕುತ್ತಿದ್ದೆ. ನನ್ನನ್ನು ಇಲ್ಲಿಗೆ ತಂದುಹಾಕಿ ಈಗ ಬೀದಿ ಪಾಲಾಗುವಂತೆ ಮಾಡಿದ್ದಾರೆ

ಮೇಲಿನ ಈ ಮಾತುಗಳು ದ.ಕ. ಜಿಲ್ಲೆಯ ವಾಮಂಜೂರು ಸಮೀಪದ ಪಚ್ಚನಾಡಿ ಎಂಬಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಒಂದು ವರ್ಷ ಮೂರು ದಿನಗಳವರೆಗೆ ನರಕಸದೃಶ ಬದುಕು ಸಾಗಿಸಿ, ನಿನ್ನೆ ಮೊನ್ನೆ ಅಲ್ಲಿನ ಅಧಿಕಾರಿಗಳಿಂದಲೇ ದೂರದ ಉಡುಪಿ ಬಸ್ ನಿಲ್ದಾಣಕ್ಕೆಸೆಯ ಲ್ಪಟ್ಟರೂ ಬದುಕುಳಿದ ಪಡುಬಿದ್ರಿ ಕೋಟ್ಯಾರು ನಿವಾಸಿಯಾಗಿದ್ದ ಪಿ.ವಿ ಶೇಷಗಿರಿ ಆಚಾರ್ಯ ಎಂಬವರ ಮನದಾಳದಿಂದ ವ್ಯಕ್ತವಾಗಿರುವಂತದ್ದು!

ಪಿಯುಸಿವರೆಗೆ ವಿದ್ಯಾಭ್ಯಾಸ ಪೂರೈಸಿರುವ ಶೇಷಗಿರಿ ರಾವ್‌ರವರಿಗೀಗ ೫೦ ವರ್ಷ. ಓದಿನ ದಿನಗಳಲ್ಲಿ ಮಾಮೂಲಿಯಂತಿದ್ದ ರಾಜ್‌ರವರಿಗೆ ತೀವ್ರ ಅಪಸ್ಮಾರ ರೋಗ ಬಡಿದು ನಡೆಯಲಾರದ ಪರಿಸ್ಥಿತಿಗೆ ತಳ್ಳಲ್ಪಟ್ಟರು. ಅಣ್ಣನೋರ್ವ ವಿದೇಶದಲ್ಲಿದ್ದರೂ ಮನೆಯವರ ಅಪಕೃಪೆಯೂ ಜತೆಯಾಗಿ ಶೇಷಗಿರಿ ರಾವ್ ಮನೆಯೊಳಗೇ ಅನಾದರಣೆ ಗೊಳಗಾದರು. ತಮ್ಮ ಹೊಟೇಲ್ ಒಂದರ ಉದ್ಯೋಗಿ. ಹೀಗಾದ ಶೇಷಗಿರಿ ರಾವ್ ಊರ ಪರಿಚಯದ ಜನರ ನಡುವೆಯೇ ಗ್ರಾಮ ದೇಗುಲದ ಆಸುಪಾಸಿನಲ್ಲಿ ತೆವಳಿಕೊಂಡು ತಿರುಗಾಡಿಕೊಂಡಿದ್ದರು. ಒಂದು ಬೆಳಿಗ್ಗೆ ಇವರನ್ನು ಗಮನಿಸಿದ್ದು ಅಂತಾರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆಯ ಪಡುಬಿದ್ರಿ ಘಟಕದ ಪದಾಧಿಕಾರಿಗಳು. ಮೂರನೇ ಪುಟಕ್ಕೆ

Advertisements
Posted in: Special Report