ದಾವೂದ್ ಮಗನ ಮದುವೆ ದುಬೈಗೆ ಶಿಫ್ಟ್

Posted on May 9, 2011

0


ನವದೆಹಲಿ: ಲಾಡೆನ್‌ನ್ನು ಪಾಕಿಸ್ತಾನ ದಲ್ಲೇ ಹತ್ಯೆಗೈದ ಬಳಿಕ ಬೆಚ್ಚಿ ಬಿದ್ದು ಕರಾಚಿಯಿಂದ ದುಬೈಗೆ ಪರಾರಿಯಾಗಿರುವ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂಗೆ ತನ್ನ ಮಗನ ಮದುವೆಯನ್ನು ದುಬೈಯಲ್ಲೇ ಮಾಡಲು ಐಎಸ್‌ಐ ಸಲಹೆ ನೀಡಿದೆ.

ದಾವೂದ್‌ನ್ ಮಗ ಮೊಯಿನ್ ಪಾಕಿಸ್ತಾನ ಮೂಲದ ಕೆನಡಾದ ಜವುಳಿ ವ್ಯಾಪಾರಿಯ ಮಗಳನ್ನು ಮೇ ೨೮ರಂದು ವರಿಸಲಿದ್ದಾನೆ. ಆದರೆ ಲಾಡೆನ್ ಹತ್ಯೆಯ ಬಳಿಕ ದಾವುದ್ ಕರಾಚಿ ಬಿಟ್ಟು ತೆರಳಬೇ ಕೆಂದು ಐಎಸ್‌ಐ ಸೂಚಿಸಿತ್ತು. ಇದರಂತೆ ದಾವೂದ್ ಮತ್ತು ಛೋಟಾ ಶಕೀಲ್ ಈಗ ದುಬೈಗೆ ಪರಾರಿಯಾಗಿದ್ದಾರೆ.

ಅಮೆರಿಕಾ ಸೇನೆ ಗೌಪ್ಯವಾಗಿ ಲಾಡೆನ್ ಹತ್ಯೆ ನಡೆಸಿದ ಬಳಿಕ ದಾವೂದ್‌ಗೆ ಕೂಡ ಪ್ರಾಣಭಯ ಕಾಡುತ್ತಿದೆ. ಇದೇ ಕಾರಣ ದಿಂದ ದಾವೂದ್ ತನ್ನ ಮಗನ ಮದುವೆ ಯನ್ನು ಕೂಡ ಸ್ಥಳಾಂತರಿಸಲು ನಿರ್ಧರಿಸಿ ದ್ದಾನೆ.

ವರ್ಷದ ಹಿಂದೆ ದಾವೂದ್ ಮಗಳ ಮದುವೆ ಪಾಕ್ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಮಗನ ಜತೆ ನಡೆದಿತ್ತು.

Advertisements
Posted in: Special Report