ತಡೆಗೋಡೆ ಇಲ್ಲದ ರಸ್ತೆಯಲ್ಲಿ ಅಪಾಯದ ಸವಾ ರಿ

Posted on May 9, 2011

0


ಮಂಗಳೂರು: ಒಂದು ಕಡೆ ಎತ್ತ ರದ ಗುಡ್ಡ, ಇನ್ನೊಂದು ಕಡೆ ಪ್ರಪಾತ ವನ್ನು ನೆನಪಿಸುವ ಕಣಿವೆ, ಇದರ ಮಧ್ಯೆ ರಸ್ತೆಯಂಚಿನಲ್ಲಿ ಯಾವುದೇ ರಕ್ಷಣಾ ಗೊಡೆಗಳಿಲ್ಲ. ವಾಹನ ಸವಾರರು ಸ್ವಲ್ಪ ಆಯ ತಪ್ಪಿದರೂ ಪ್ರಪಾತಕ್ಕೆ ಬಿದ್ದ ಹಾಗೆಯೇ.

ಇಂತಹದ್ದೊಂದು ಪರಿಸರ ಮಂಗಳೂರು ನಗರ ಮಧ್ಯೆದಲ್ಲಿಯೆ ಇದೆ. ಕರಂಗಲ್ಪಾಡಿಯಿಂದ ನ್ಯಾಯಾ ಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಭಯಾನಕ ಘಾಟಿಯನ್ನು ನೆನಪಿಸುವಂ ತಿದೆ. ಆದರೆ ಇಲ್ಲಿ ಯಾವುದೇ ರಕ್ಷಣಾ ವ್ಯವಸ್ಥೆ ಕಲ್ಪಿಸಲಾಗಿಲ್ಲ.

ನ್ಯಾಯಾಲಯಕ್ಕೆ ಬರುವವರು, ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಗಳಿಗೆ ಇದು ಪ್ರಮುಖ ಮಾರ್ಗವಾ ಗಿದ್ದರೆ, ಕರಂಗಲ್ಪಾಡಿ ಹಾಗೂ ಕೆ.ಎಸ್. ರಾವ್ ರೋಡ್ ಮಧ್ಯೆ ಅಡ್ಡದಾರಿ ಹಿಡಿಯುವ ವಾಹನ ಸವಾರರಿಗೂ ಇದುವೆ ಸಂಪರ್ಕ ರಸ್ತೆ. ಆದುದರಿಂದ ಇಲ್ಲಿ ವಾಹನಗಳ ಭರದ ಓಡಾಟ ಇರುತ್ತದೆ.

ಏರಿನಲ್ಲಿ ವೇಗವಾಗಿ ಸಾಗುವ ಹಾಗೂ ಓವರ್‌ಟೇಕ್ ಮಾಡುವ ವಾಹನ ಸವಾರರು ಸ್ವಲ್ಪ ಆಯ ತಪ್ಪಿದರೂ ರಸ್ತೆಯಂಚಿನಿಂದ ಜಾರಿ ಪ್ರಪಾತದಂತಿರುವ ಹೊಂಡಕ್ಕೆ ಬೀಳುವ ಅಪಾಯವಿದೆ.

ಇದುವರೆಗೆ ಬಿದ್ದಿಲ್ಲ ಎಂದು ನಿರ್ಲಕ್ಷಿಸುವುದಕ್ಕಿಂತ ಬೀಳುವುದಕ್ಕೆ ಮೊದಲು ತಡೆಗೋಡೆ ನಿರ್ಮಿಸುವುದು ಜಾಣತನವಲ್ಲವೇ?

Advertisements
Posted in: Special Report