ಗುಂಪು ಘರ್ಷಣೆ

Posted on May 9, 2011

0


ವಿಟ್ಲ: ವಧುವಿನ ಮನೆಗೆ ಬರುತ್ತಿದ್ದ ವರನ ಮದುವೆ ದಿಬ್ಬಣದ ಮೆರವಣಿಗೆ ವೇಳೆ ಅಡ್ಡವಾಗಿ ಬೈಕ್ ಚಲಾಯಿಸಿದನೆಂಬ ಕಾರಣಕ್ಕೆ ವರನ ಕಡೆಯವರು ಬೈಕ್ ಸವಾರನನ್ನು ತರಾಟೆಗೆ ತೆಗೆದುಕೊಂಡು ಥಳಿಸಿರುವ ಘಟನೆ ಕನ್ಯಾನದ ವಿಜಯಡ್ಕದಲ್ಲಿ ನಡೆದಿದ್ದು, ಇದಕ್ಕೆ ಪ್ರತೀಕಾರವಾಗಿ ಇತ್ತಂಡಗಳ ನಡುವೆ ಘರ್ಷಣೆ ಸಂಭವಿಸಿ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು.

ಭಾನುವಾರದಂದು ಕನ್ಯಾನ ಗ್ರಾಮದ ವಿಜಯಡ್ಕ ಎಂಬಲ್ಲಿ ಉಮ್ಮರ್ ಎಂಬವರ ಮಗಳ ಮದುವೆಯಿತ್ತು. ಮಧ್ಯಾಹ್ನದ ವೇಳೆಗೆ ವರನ ಕಡೆಯವರು ವಧುವಿನ ಕಡೆಗೆ ಬರುವ ವರಿದ್ದರು. ಮನೆ ಮುಂದಿನ ರಸ್ತೆಯಲ್ಲಿ ಅರ್ಧ ಕಿ.ಮೀ.ವರೆಗೆ ದಫ್ ನೃತ್ಯದಲ್ಲಿ ವರನನ್ನು ಕರೆತರುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದರು. ಈ ವೇಳೆ ವಿಜಯಡ್ಕ ನಿವಾಸಿ ವಿನೋದ್ ಎಂಬಾತ ಬೈಕ್ ಅನ್ನು ಮೆರವಣಿಗೆ ನಡುವೆಯೇ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವರನ ಕಡೆಯಲ್ಲಿದ್ದ ಕೆಲ ಯುವಕರು ತಡೆದರು. ಇದನ್ನು ಪ್ರಶ್ನಿಸಿದಕ್ಕೆ ವಿನೋದ್ ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಇಬ್ಬರು ಯುವಕರು ವಿನೋದನಿಗೆ ಹಲ್ಲೆ ನಡೆಸಿದರು. ಇದರಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿ ವಿನೋದ್ ದೂರವಾಣಿ ಮೂಲಕ ತನ್ನ ಸ್ನೇಹಿತರೊಂದಿಗೆ ನಡೆದ ವಿಷಯವನ್ನು ತಿಳಿಸಿದನು. ಸ್ನೇಹಿತರ ಗುಂಪು ಸ್ಥಳಕ್ಕೆ ಧಾವಿಸಿ ಹೊಡೆದಿರುವುದನ್ನು ಪ್ರಶ್ನಿಸಿದಾಗ ಮೂರನೇ ಪುಟಕ್ಕೆ

Advertisements
Posted in: Special Report