ಕಾರಿನಲ್ಲಿದ್ದ ಸೊತ್ತು ಕಳವು

Posted on May 9, 2011

0


ಮಂಗಳೂರು: ಮಲ್ಪೆ ಬೀಚ್‌ನಲ್ಲಿ ಪಾರ್ಕ್ ಮಾಡಿದ್ದ ಮಾರುತಿ ಎಸ್ಟಿಮ್ ಕಾರಿನಲ್ಲಿದ್ದ ಮೊಬೈಲ್ ಹಾಗೂ ಚಿನ್ನದ ಸಾಮಾನುಗಳಿದ್ದ ಚೀಲ ಶವಾರ ರಾತ್ರಿ ಕಳವಾದ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಿನ್ನಮೂಲ್ಕಿಯ ಶೇಖ್ ಶಮಿವುಲ್ಲಾ ಎಂಬವರು ತಮ್ಮ ಸಂಬಂಧಿಕರಾದ ರೆಮೋನ್, ಕೆನತ್, ಎಲಿನಾ ಹಾಗೂ ಸುಷ್ಮಾ ಕುಂದರ್ ಎಂಬವರೊಂದಿಗೆ ಮಲ್ಪೆ ಬೀಚಿಗೆ ಬಂದಿದ್ದು, ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ, ಕಾರ್‌ಗೆ ಲಾಕ್ ಮಾಡಿ ಬೀಚ್‌ಗೆ ಹೋಗಿದ್ದರು. ಸಂಜೆ ೭:೩೦ರ ಸುಮಾರಿಗೆ ಹಿಂದಿರುಗಿ ಲಾಕ್ ತೆರೆದಾಗ ಕಾರ್‌ನಲ್ಲಿಟ್ಟಿದ್ದ ಕೆಲ ಸೊತ್ತುಗಳು ಕಾಣೆಯಾಗಿದ್ದು ಗಮನಕ್ಕೆ ಬಂದಿತು.

ಬ್ಯಾಗ್‌ನಲ್ಲಿದ್ದ ೧೦೦೦ರೂ. ಮೌಲ್ಯದ ಮೊಬೈಲ್, ೧೭ಸಾವಿರ ರೂ. ಮೌಲ್ಯದ ವಜ್ರದ ಉಂಗುರು, ೧೦ಸಾವಿರ ರೂ. ನಗದು, ೫ಸಾವಿರ ರೂ. ಮೌಲ್ಯದ ವಾಚ್‌ಎರಡು ಕ್ರೆಡಿಟ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಚೀಟಿ ಮತ್ತಿತರ ಸೊತ್ತುಗಳು ಕಳವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪಂಪ್ ಕಳವು

ಮಂಗಳೂರು: ಮಲ್ಪೆ ಸಮೀಪದ ತೆಂಕಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿರುವ ಬಾವಿಗೆ ಅಳವಡಿಸಲಾಗಿದ್ದ ಸಬ್‌ಮರ್ಸಿಬಲ್ ಮೋಟಾರ್ ಪಂಪ್‌ನ್ನು ಶುಕ್ರವಾರ ರಾತ್ರಿ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳವಾಗಿರುವ ಮೋಟಾರಿನ ಮೌಲ್ಯ ೧೦ ಸಾವಿರ ರೂ. ಗಳೆಂದು ಅಂದಾಜಿಸಲಾಗಿದೆ ಎಂದು ದೂರಿನಲ್ಲಿ ಪ್ರಾಂಶುಪಾಲ ಜಿ. ಯೋಗಾನಂದ ತಿಳಿಸಿದ್ದಾರೆ.

Advertisements
Posted in: Special Report