ಕಾರಿನಲ್ಲಿದ್ದ ಆಭರಣ ಕಳವು

Posted on May 9, 2011

0


ಮಂಗಳೂರು: ಬೀಚ್‌ನಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿದ್ದ ಚಿನ್ನಾಭರಣ ಹಾಗೂ ಇತರ ಸೊತ್ತುಗಳಿದ್ದ ಬ್ಯಾಗನ್ನು ಕಳವು ಮಾಡಿರುವ ಘಟನೆ ಮಲ್ಪೆಯಲ್ಲಿ ಶನಿವಾರ ಸಂಜೆ ನಡೆದಿದೆ. ಉಡುಪಿ ಕಿನ್ನಿಮೂಲ್ಕಿಯ ಎ.ಎಸ್ ಬಂಗೇರಾ ಎಂಬವರು ತನ್ನ ಕುಟುಂಬದವರೊಂದಿಗೆ ಮಲ್ಪೆ ಬೀಜ್‌ಗೆ ತೆರಳಿದ್ದರು. ಅಲ್ಲಿ ಅವರು ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿ ಹೋಗಿದ್ದ ವೇಳೆ ಕಳ್ಳರು ಕಾರಿನ ಡೋರ್ ತೆಗೆದು ಒಳಗಿದ್ದ ಬಂಗೇರಾರವರ ಮಗಳು ಎಲೆನಾ ಸುಷ್ಮಾ ಹಾಗೂ ಅವರ ಸಂಬಂಧಿ ರೆವೋನ ಎಂಬವರ ಬ್ಯಾಗನ್ನು ಕಳವು ನಡೆಸಲಾಗಿದೆ.

ಕೋಟ: ಮಹಿಳೆ ನಾಪತ್ತೆ

ಮಂಗಳೂರು: ಉಡುಪಿ ಕೋಟಾ ಗ್ರಾಮದ ಸಾಸ್ತಾನ ತುಂಗರಮಠದಲ್ಲಿ ಮೇ ಆರರಂದು ಮದುವೆಗೆಂದು ಬೆಂಗಳೂರಿನ ಕನಕಪುರದಿಂದ ಬಂದಿದ್ದ ಮಹಿಳೆಯೊಬ್ಬಳು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಯುವತಿಯನ್ನು ಕಾಶಿಯಮ್ಮ ಎಂದು ಗುರುತಿಸಲಾಗಿದೆ. ಇವರು ಕೋಟಾ ಹೆಗ್ಗುಂಜೆ ಗ್ರಾಮದ ಮಂದಾರ್ತಿಯ ಮಂಜುನಾಥ್ ಎಂಬವರ ಮದುವೆಗೆ ಆಗಮಿಸಿದ್ದರು. ಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisements
Posted in: Special Report