ಉಳ್ಳಾಲ ದರ್ಗಾ ಸಮಿತಿಯ ಚುನಾವಣೆ ಮೇಲಂಗಡಿಯಲ್ಲ ಿ ರಾಜಕೀಯ ಹಣಾಹಣಿ

Posted on May 9, 2011

0


ಮಂಗಳೂರು: ಕೇರಳ, ಕರ್ನಾಟ ಕದ ಸುನ್ನಿ ಮುಸ್ಲಿಮರ ಅತೀ ನಂಬು ಗೆಯ ಕೇಂದ್ರ ಎನಿಸುವ ಉಳ್ಳಾಲ ಸಯ್ಯದ್ ಮದನಿ ದರ್ಗಾದ ಆಡಳಿತ ಸಮಿತಿಯ ಸದಸ್ಯರ ಆಯ್ಕೆಯ ಪ್ರಕ್ರಿಯೆ ಗಳು ಉಳ್ಳಾಲ ವ್ಯಾಪ್ತಿಯ ಕರಿಯದಲ್ಲಿ ನಡೆಯುತ್ತಿವೆ.

ಚುನಾವಣೆ ಇಲ್ಲದೆಯೆ ಸದಸ್ಯರನ್ನು ಆಯ್ಕೆ ಮಾಡಬೇಕು ಎಂಬುದು ನಿಯಮವಾದರೂ ಮೊಹಲ್ಲಾಗಳ ವ್ಯಾಪ್ತಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾದಾಗ ಚುನಾವಣೆ ಅನಿವಾರ್ಯ ವಾಗುತ್ತದೆ. ಇಂತಹ ಅನಿವಾರ್ಯ ಚುನಾವಣೆಯ ಲಕ್ಷಣಗಳು ಈಗ ಮೇಲಂಗಡಿ ಕರಿಯದಲ್ಲಿ ಕಾಣಿಸುತ್ತಿದ್ದು, ಸ್ಥಳೀಯರಲ್ಲಿ ಮಾತ್ರವಲ್ಲ ಉಳ್ಳಾಲ ದರ್ಗಾದ ಆಗುಹೋಗುಗಳನ್ನು ಅರಿ ಯುವ ಜಿಲ್ಲೆಯ ಸುನ್ನಿ ಮುಸ್ಲಿಮರ ಲ್ಲಿಯೂ ಕುತೂಹಲ ಮೂಡಿಸಿದೆ.

ಓರ್ವ ನಾಮನಿರ್ದೇಶಿತ ಸದಸ್ಯ ಸೇರಿದಂತೆ ೧೦ ಜನ ಸದಸ್ಯರನ್ನು ದರ್ಗಾ ಸಮಿತಿಗೆ ಕಳುಹಿಸುವ ಅವಕಾಶ ಮೇಲಂಗಡಿ ಕರಿಯಾಕ್ಕೆ ಇದೆ. (ಕರಿಯ ವ್ಯಾಪ್ತಿಯ ಜನಸಂಖ್ಯೆಯನ್ನು ಆಧರಿಸಿ ಸದಸ್ಯರ ಪ್ರಮಾಣವನ್ನು ನಿಗದಿಪಡಿ ಸಲಾಗುತ್ತದೆ.) ಇದರಲ್ಲಿ ಐವರು ಸದಸ್ಯರನ್ನು ಮೇಲಂಗಡಿ ಕರಿಯಾ ವ್ಯಾಪ್ತಿಯ ಬೇರೆ ಮೊಹಲ್ಲಾಗಳಿಂದ ಆಯ್ಕೆ ಮಾಡಿ ಕಳುಹಿಸಲಾಗುತ್ತಿದ್ದರೆ. ಪ್ರಮುಖ ನಾಲ್ಕು ಸದಸ್ಯರು ಹೊಸ ಮಸೀದಿಯ ವ್ಯಾಪ್ತಿಯಿಂದ ಆಯ್ಕೆ ಯಾಗಬೇಕಿದೆ. ಈಗ ರಾಜಕೀಯ ಜಿದ್ದಾಜಿದ್ದಿ ನಡೆಯುತ್ತಿರುವುದೇ ಈ ಹೊಸ ಮಸೀದಿಯ ಸದಸ್ಯರ ಆಯ್ಕೆ ಯಲ್ಲಿ. ನಾಲ್ಕು ಸದಸ್ಯರ ಆಯ್ಕೆಗೆ ಸರಿಸುಮಾರು ೧೫ಮಂದಿ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ೧೦ಜನರು ಚುನಾವಣೆಯ ಸಿದ್ದತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ನಿಕಟ ಪೂರ್ವ ಸದಸ್ಯ ಮುಸ್ತಫಾ ಅಬ್ದುಲ್ಲಾ ಅಲ್ಲದೆ ಫಾರೂಕ್ ಉಳ್ಳಾಲ, ಜೆ.ಮುಹಮ್ಮದ್ ಐದನೇ ಪುಟಕ್ಕೆ

Advertisements
Posted in: Special Report