ಇನ್ನೂ ಪತ್ತೆಯಾಗದ ವಂಚಕ ಉದ್ಯಮಿ

Posted on May 9, 2011

0


ಮಂಗಳೂರು: ಗ್ಲೋಬಲ್ ಇಂಡೆಕ್ಸ್ ಹೆಸರಿನಲ್ಲಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ಅಮರ್‌ಸತೀಶ್ ಎಂಬಾತ ಇನ್ನೂ ತಲೆಮರೆಸಿ ಕೊಂಡಿದ್ದು ಬಂಟ್ವಾಳ ನಗರ ಪೊಲೀಸರು ಆತನ ತಲಾಶೆಯಲ್ಲಿದ್ದಾರೆಂದು ತಿಳಿದು ಬಂದಿದೆ.

ಒಂದೂವರೆ ವರುಷದ ಹಿಂದೆ ಕೇವಲ ಒಂದು ಲೇಡಿಸ್ ಟೈಲರಿಂಗ್ ಶಾಪನ್ನು ಹೊಂದಿದ್ದ ಸತೀಶ್ ಆ ಬಳಿಕದ ಅವಧಿಯಲ್ಲಿ ಕೋಟಿ ಕೋಟಿ ಆಸ್ತಿಯ ಒಡೆಯನಾಗಿ ಬೆಳೆದಿರುವುದರ ಹಿಂದೆ ವಂಚನೆಯ ಹಣವೇ ಇರುವುದಾಗಿ ಸಾರ್ವಜನಿಕರು ದೂರಿದ್ದಾರೆ. ತನ್ನ ಅಣ್ಣ ಅಶೋಕ್ ಜೊತೆ ನೇರ ಪಾಲುದಾರಿಕೆಯನ್ನು ಹೊಂದಿ, ಆತನ ಹಾದಿಯನ್ನೇ ಈತನೂ ತುಳಿದ ಕಾರಣ ಅಮರ್ ಸತೀಶ್ ಇಂದು ಫ್ಲಾಟ್, ಕೋಟಿ ಮೌಲ್ಯದ ಮನೆ, ಹತ್ತು ಹಲವು ಕಡೆ ಜಾಗವನ್ನು ಹೊಂದಲು ಸಾಧ್ಯವಾಯಿತು ಎಂದು ಸಾರ್ವಜನಿಕರು ದೂರಿದ್ದಾರೆ. ಇದೀಗ ಆತನನ್ನು ಬಂಧಿಸಿದರೆ ಆತನಲ್ಲಿರುವ ಹಣವನ್ನು ವಂಚನೆಗೊಳಗಾ ದವರಿಗೆ ನೀಡಬಹುದು ಎಂದು ಸಾರ್ವಜನಿಕರು ಮೂರನೇ ಪುಟಕ್ಕೆ

Advertisements
Posted in: Special Report