ಆರ್ಸಿಬಿಗೆ ಸುಲಭ ತುತ್ತಾದ ಕೊಚ್ಚಿ ಚಿನ್ನಸ್ವಾ ಮಿಯಲ್ಲಿ ಗೇಲ್ ರನ್ ಪ್ರವಾಹ

Posted on May 9, 2011

0


ಬೆಂಗಳೂರು: ಮತ್ತೆ ಕ್ರಿಸ್ ಗೇಲ್ ಸ್ಫೋಟಕ ಆಟ ಹಾಗೂ ದಿಲ್ಶಾನ್‌ರ ಅರ್ಧಶತಕದ ನೆರವಿನಿಂದ ಕೊಚ್ಚಿ ಟಸ್ಕರ‍್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ‍್ಸ್ ಒಂಬತ್ತು ವಿಕೆಟ್‌ಗಳ ಜಯ ದಾಖಲಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಕೊಚ್ಚಿ ನಿಗದಿತ ೨೦ ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗೆ ೧೨೫ ರನ್ ಪೇರಿಸಿತು. ಗುರಿ ಬೆನ್ನತ್ತಿದ್ದ ಬೆಂಗಳೂರು ಕೇವಲ ೧೩.೧ ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ೧೨೮ ರನ್ ದಾಖಲಿಸಿ ಗೆಲುವಿನ ನಗೆ ಬೀರಿತು. ಕೊನೆಯ ಪಂದ್ಯದಂತೆ ಇಂದಿನ ಪಂದ್ಯದಲ್ಲೂ ಬೆಂಗಳೂರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮೊದಲ ಓವರ್‌ನಿಂದಲೇ ಅಬ್ಬರದ ಆಟಕ್ಕೆ ಒತ್ತು ನೀಡಿದ ಗೇಲ್ ಹಾಗೂ ದಿಲ್ಶಾನ್ ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನರಾಗಿ ಪರಿಣಮಿಸಿದರು. ಪೊವಾರ್ ಎಸೆದ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ೨೦ ರನ್‌ಗಳನ್ನು ದಿಲ್ಶಾನ್ ಕಲೆಹಾಕಿದ್ದರು. ನಂತರ ಪರಮೇಶ್ವರನ್‌ರ ಮೂರನೇ ಓವರ್‌ನಲ್ಲಿ ಗೇಲ್ ಬರೊಬ್ಬರಿ ೩೭ ರನ್ ಪೇರಿಸಿದ್ದು ತಂಡ ದ ಬ್ಯಾಟಿಂಗ್ ಆರ್ಭಟಕ್ಕೆ ಕನ್ನಡಿ ಹಿಡಿದಂತಿತ್ತು. ಕೇವಲ ೩.೫ ಓವರ್ ಗಳಲ್ಲಿ ಈ ಜೋಡಿ ೬೭ ರನ್ ಕಲೆಹಾಕಿತ್ತು. ಈ ವೇಳೆ ೨೦ ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಐದು ಸಿಕ್ಸ್ ನೆರವಿನಿಂದ ೪೪ ರನ್ ಗಳಿಸಿದ್ದ ಗೇಲ್ ಔಟಾಗಿ ಅರ್ಧಶತಕ ದಿಂದ ವಂಚಿತವಾದರು. ದಿಲ್ಶಾನ್ ಕೇವಲ ೩೦ ಎಸೆತಗಳಲ್ಲಿ ಅರ್ಧಶತಕ (೫೨)ದಾಖಲಿಸಿದರು. ಕೊಹ್ಲಿ (೨೭) ಜೊತೆ ಎರಡನೇ ವಿಕೆಟ್‌ಗೆ ಅಜೇಯ ೬೧ ರನ್‌ಗಳ ಜೊತೆಯಾಟ ನಡೆಸಿ ಸುಲಭ ಗೆಲುವು ತಂದರು. ಉರುಳಿದ ಒಂದು ವಿಕೆಟ್ ವಿನಯ್ ಪಾಲಾಯಿತು.

ಮಲಿಂಗ ಸ್ಟೈಲ್

ಆರ್ಭಟಿಸುತ್ತಿದ್ದ ಕ್ರಿಸ್ ಗೇಲ್‌ನ್ನು ಔಟ್ ಮಾಡಲು ವಿನಯ್ ಮುಂಬೈ ಇಂಡಿಯನ್ಸ್‌ನ ಲಸಿತ್ ಮಲಿಂಗ್ ಸ್ಟೈಲ್ ಗೆ ಮೊರೆ ಹೋಗಬೇಕಾದ್ದು ವಿಶೇಷ.

Advertisements
Posted in: Special Report