ಅಪಘಾತ: ಒಬ್ಬ ಬಲಿ; ಇಬ್ಬರಿಗೆ ಗಾಯ

Posted on May 9, 2011

0


ಮಂಗಳೂರು: ಟಾಟಾ ಸಫಾರಿ ವಾಹನವೊಂದು ಬೈಕ್ ಹಾಗೂ ಪಾದಾಚಾರಿಯೊಬ್ಬರಿಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಉಡುಪಿ ರಾಷ್ಟ್ರೀಯ ಹೆದ್ದಾರಿ ೧೭ರ ಸಂತೆಕಟ್ಟೆಯ ಆಶಿರ್ವಾದ್ ಟಾಕೀಸಿನ ಎದುರು ನಡೆದಿದೆ.

ಮೃತರನ್ನು ಬೈಕ್ ಸವಾರ ಕುಂದಾಪುರದ ಬಸ್ರೂರು ಮರಗೋಳಿಯ ಶೋಯೆಬ್ (೨೨) ಎಂದು ಗುರುತಿಸಲಾಗಿದೆ. ಹಿಂಬದಿಯ ಸವಾರ ಬಸ್ರೂರಿನ ಅಬ್ಬಾಸ್ ಎಂಬವರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಶಿರ್ವದ ತಾಹೀರ್ ನಕಾಶ್ (೨೯) ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಸಂತೆಕಟ್ಟೆಯಿಂದ ಉಡುಪಿಗೆ ಬರುತ್ತಿದ್ದ ಟಾಟಾ ಸಫಾರಿ ಮುಂದಿನಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದು ನಡೆದುಕೊಂಡು ಹೋಗುತ್ತಿದ್ದ ತಾಹೀರ್‌ಗೆ ಢಿಕ್ಕಿ ಹೊಡೆದಿದೆ. ಸಫಾರಿ ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisements
Posted in: Special Report