ಮನೆಗೆ ಬೆಂಕಿ: ಲಕ್ಷಾಂತರ ನಷ್ಟ

Posted on May 8, 2011

0


ಕಾಸರಗೋಡು: ವಿಘ್ನಸಂತೋಷಿ ಗಳಾರೋ ಇಟ್ಟ ಬೆಂಕಿಯಿಂದ ಎರಡು ಮಹಡಿಯ ಮನೆಯೊಂದು ಭಾಗಶ: ಹಾನಿ ಗೊಂಡಿದ್ದು ಲಕ್ಷಾಂತರ ರೂ. ನಷ್ಟ ಸಂಭವಿ ಸಿರುವ ಘಟನೆ ಚೌಕಿ ಎಂಬಲ್ಲಿ ನಡೆದಿದೆ.

ಕೊಲ್ಲಿ ರಾಷ್ಟ್ರದಲ್ಲಿ ಕುಟುಂಬ ಸಮೇತ ರಾಗಿ ನೆಲೆಸಿರುವ ಕೊಳ್ನಾಡಿನ ಅಬೂಬಕರ್ ಎಂಬವರಿಗೆ ಚೌಕಿ ಬದರ್ ಜುಮ್ಮಾ ಮಸೀದಿ ಸಮೀಪವಿರುವ ಮನೆಗೆ ಬೆಂಕಿ ಹಾಕಲಾಗಿದೆ.

ಶನಿವಾರ ಬೆಳಗ್ಗಿನ ವೇಳೆ ಮಸೀದಿಗೆ ತೆರಳುತ್ತಿದ್ದ ಮಂದಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಸಹಕಾರಿಯಾದರು. ಮನೆಯ ಬಾಗಿಲು, ಕಿಟಕಿ, ಮೊದಲಾದ ಬೆಲೆಬಳುವ ವಸ್ತುಗಳು ಬೆಂಕಿಯ ಕಿನ್ನಾಲೆಗೆ ಸುಟ್ಟುಹೋಗಿದೆ. ತಿಂಗಳಿಂದ ಪ್ರದೇಶದಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿದ್ದು, ಇಲ್ಲಿಗೆ ಇದು ಐದನೇ ಪ್ರಕರಣವಾಗಿದೆ. ಇಷ್ಟಾ ದರೂ ಪೊಲೀಸರು ಮಾತ್ರ ಆರೋಪಿಗಳನ್ನು ಸೆರೆಹಿಡಿಯದೆ ಮೌನವಾಗಿರುವುದು ನಾಗರಿ ಕರಲ್ಲಿ ಹಲವು ಸಂಶಯಗಳಿಗೆ ಕಾರಣವಾಗಿದೆ.

Posted in: Special Report