ಬೈಕ್ ಡಿಕ್ಕಿ: ನಾಲ್ವರಿಗೆ ಗಾಯ

Posted on May 8, 2011

0


ಮಂಗಳೂರು: ಮಂಗಳೂರು ನಗರದ ಹೊರವಲಯದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ದ್ವಿಚಕ್ರವಾಹನ ಸವಾರರು ಗಾಯಗೊಂಡಿದ್ದಾರೆ.

ಇಂದು ಬೆಳಗಿನ ಜಾವ ಆರು ಗಂಟೆಯ ಸುಮಾರಿಗೆ ಕುಡುಪು ದೇವ ಸ್ಥಾನದ ಬಳಿ ಸಂಭವಿಸಿದ ಅಪಘಾತ ದಲ್ಲಿ ಮಂಗಳೂರಿನಿಂದ ಮೂಡಶೆಡ್ಡೆ ಯತ್ತ ಸಾಗುತ್ತಿದ್ದ ಮೂಡಶೆಡ್ಡೆ ನಿವಾಸಿ ಸುರೇಶ್ ಎಂಬವರ ಬೈಕ್‌ಗೆ ಇಳಿಜಾರಿ ನಲ್ಲಿ ಬಂದ ಮೀನು ವ್ಯಾಪಾರಿ ಆಸೀಫ್ ಎಂಬವರು ಚಲಾಯಿಸುತ್ತಿದ್ದ ಬಜಾಜ್ ಎಂ.೮೦ ವಾಹನ ಢಿಕ್ಕಿ ಹೊಡೆಯಿತೆನ್ನ ಲಾಗಿದೆ. ಇಬ್ಬರಿಗೂ ಗಂಭೀರ ಗಾಯ ವಾಗಿದ್ದು, ನಗರದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಡುಪು ಇಳಿಜಾರಿನಲ್ಲಿ ಬಜಾಜ್ ಎಂ.೮೦ ಚಾಲಕ ಅತಿವೇಗದಿಂದ ಬಲ ಬದಿಗೆ ವಾಹನ ಚಲಾಯಿಸಿಕೊಂಡು ಬಂದಿದ್ದರಿಂದ ಈ ಅವಘಡ ಸಂಭವಿ ಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಪಘಾತದ ರಭಸಕ್ಕೆ ಎರಡೂ ವಾಹನ ಗಳೂ ನುಜ್ಜುಗುಜ್ಜಾಗಿವೆ.

ಗೋರಿಗುಡ್ಡೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಎರಡು ಬೈಕ್‌ಗಳು ಪರಸ್ಪರ ಢಿಕ್ಕಿ ಹೊಡೆದು ಬೈಕ್ ಸವಾರರಾದ ಕೇರಳ ಮೂಲದ ಡಾ.ಅಬೂಸಾಲಿ ಹಾಗೂ ನಾಗೂರಿ ನಿವಾಸಿ ಶ್ರೀನಾಥ್ ಯಾನೆ ಶ್ರೀಕಾಂತ್ ಗಾಯಗೊಂಡಿದ್ದಾರೆ.

Posted in: Special Report