ಬಾಲಕ ನಾಪತ್ತೆ

Posted on May 8, 2011

0


ವಿಟ್ಲ: ಅಣ್ಣನ ಹೊಟೇಲಿಗೆಂದು ಮನೆ ಯಲ್ಲಿ ತಿಳಿಸಿ ಹೋದ ಬಾಲಕನೊಬ್ಬ ನಾಪತ್ತೆ ಯಾಗಿರುವ ಕುರಿತು ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಲ್ನಾಡು ಕುಡ್ತಮುಗೇರುವಿನ ಬಾಲಕೃಷ್ಣ (೧೭) ನಾಪತ್ತೆಯಾದಾತ. ಮೇ ೩ರಂದು ಮುಲ್ಕಿಯಲ್ಲಿರುವ ತನ್ನ ಅಣ್ಣನ ಹೊಟೇಲಿಗೆ ಹೋಗುವುದಾಗಿ ತಿಳಿಸಿದ್ದಾನೆ. ಕೊಡ್ತ ಮುಗೇರುವಿನಲ್ಲಿರುವ ತನ್ನ ದೊಡ್ಡಪ್ಪ ಲೋಕೇಶ ಎಂಬವರ ಮನೆಯಲ್ಲಿ ವಾಸವಿದ್ದು, ಅಲ್ಲಿಂದಲೇ ನಾಪತ್ತೆಯಾಗಿರುವ ಬಗ್ಗೆ ಅವರು ವಿಟ್ಲ ಠಾಣೆಯಲ್ಲಿ ದೂರು ನೀಡಿದ್ದಾರೆ.

Posted in: Special Report