ಒಸಾಮಾ ಮಕ್ಕಳನ್ನು ಸಾಕಲಿಚ್ಛಿಸಿರುವ ಲಾಲ್ ಮಸೀ ದಿ

Posted on May 8, 2011

0


ಲಂಡನ್: ಒಸಾಮಾ ಬಿನ್ ಲಾಡೆನ್ ಮೇಲಿನ ಪ್ರೀತಿಯಿಂ ದಾಗಿ ಈಗ ಆತನ ಸಣ್ಣ ಮಕ್ಕ ಳನ್ನು ಇಸ್ಲಾಮಾಬಾದ್‌ನ ಲಾಲ್ ಮಸ್ಜಿದ್ ಮಸೀದಿಯ ಮುಖ್ಯಸ್ಥ ಸಾಕಲು ಮುಂದೆ ಬಂದಿರುವು ದಾಗಿ ತಿಳಿದುಬಂದಿದೆ.

ಅಮೆರಿಕಾಗೆ ದಾಳಿ ನಡೆಸಿದ ಹತ್ತು ವರ್ಷಗಳ ಬಳಿಕ ಅಮೆರಿಕಾ ಸೇನೆ ಯಿಂದ ಹತ್ಯೆಯಾದ ಲಾಡೆನ್ ಮಕ್ಕಳನ್ನು ಇಸ್ಲಾಮಾ ಬಾದ್‌ನಲ್ಲಿ ವಿವಾದಿತ ಲಾಲ್ ಮಸೀದಿಯ ಮುಖ್ಯಸ್ಥ ಮೌಲಾನಾ ಅಬ್ದುಲ್ ಅಜೀಜ್ ಸಾಕುತ್ತಾನೆ ಎನ್ನಲಾಗಿದೆ. ಲಾಡೆನ್ ಸತ್ತಿರುವುದನ್ನು ನಾವು ಒಪ್ಪಿಕೊಳು ತ್ತೇವೆ ಮತ್ತು ಆತ ನಮಗೆ ಹುತಾತ್ಮ ಎಂದು ಅಜೀಜ್ ಹೇಳಿದ್ದಾನೆ.

ಹಲವಾರು ಮಂದಿ ಒಸಾಮಾನ ಮಕ್ಕಳನ್ನು ಸಾಕಲು ಮುಂದೆ ಬರಬಹುದು. ನಾವು ಅವರ ಪೋಷಣೆ ಮಾಡಲಿದ್ದೇವೆ. ಲಾಲ್ ಮಸೀದಿ ಪಾಕ್‌ನ ಅತ್ಯಂತ ಕಟ್ಟಾ ಧಾರ್ಮಿಕ ಮಸೀದಿಯಾಗಿದೆ. ನಾಲ್ಕು ವರ್ಷಗಳ ಮೊದಲು ಸೇನೆ ಮತ್ತು ಉಗ್ರರ ಮಧ್ಯೆ ನಡೆದ ದಾಳಿಯಲ್ಲಿ ಈ ಮಸೀದಿಗೆ ಹಾನಿಯಾಗಿತ್ತು.

ಆದರೆ ಪಾಕ್‌ನ ಕೆಲವು ಸರಕಾರಿ ಅಧಿಕಾರಿಗಳ ಪ್ರಕಾರ, ಒಸಾಮಾ ಮಕ್ಕಳನ್ನು ಮದ್ರಸಕ್ಕೆ ಒಪ್ಪಿಸುವ ಸಾಧ್ಯತೆಗಳು ತುಂಬಾ ಕಡಿಮೆ ಇದೆ. ಆ ಮಸೀದಿಯಲ್ಲಿ ಮಕ್ಕಳು ಬೆಳೆಯುವುದರಿಂದ ಅವರು ಜಿಹಾದಿಗಳಾಗುವ ಸಾಧ್ಯತೆಗಳಿವೆ ಎಂದು ಹೆಸರು ಹೇಳಲಿಚ್ಛಿಸದ ಪಾಕ್ ಅಧಿಕಾರಿ ತಿಳಿಸಿದ್ದಾರೆ.

Posted in: Special Report