ಎಂಡೋಸಲ್ಫಾನ್ಗೆ ಬಲಿಯಾದ ಪ್ರಜಿತಾ ಮನೆಗೆ ಸಚಿವೆ ಭೇಟಿ

Posted on May 8, 2011

0


ಕಾಸರಗೋಡು: ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಶುಶ್ರೂಷೆ ದೊರಕದೆ ದಾರುಣ ರೀತಿಯಲ್ಲಿ ಸಾವನ್ನಪ್ಪಿದ ಎಂಡೋಸಲ್ಫಾನ್ ಪೀಡಿತ ಮಗು ಪ್ರಜಿತಾ ಮನೆಗೆ ರಾಜ್ಯ ಆರೋಗ್ಯ ಸಚಿವೆ ಪಿ.ಕೆ.ಶ್ರೀಮತಿ ಶನಿವಾರ ಭೇಟಿ ನೀಡಿದರು.

ಬೆಳ್ಳೂರು ಗೋಳಿಕಟ್ಟೆಯಲ್ಲಿರುವ ಮೃತ ಪ್ರಜಿತಾಳ ಮನೆಗೆ ಭೇಟಿ ನೀಡಿದ ಸಚಿವೆ ಮಗುವಿನ ತಾಯಿ ಜಯಂತಿ ಹಾಗೂ ತಂದೆ ಶಶಿಧರ ಎಂಬವರಿಗೆ ಸಾಂತ್ವನ ಹೇಳಿದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಎರಡು ಲಕ್ಷ ರೂ ಕೂಡಲೇ ಮಂಜೂರು ಮಾಡುವುದಾಗಿ ಭರವಸೆಯನ್ನು ನೀಡಿದರು. ಈ ವೇಳೆ ಸಂಸದ ಕರುಣಾಕರನ್, ಶಾಸಕ ಸಿ.ಟಿ. ಅಹಮ್ಮದಾಲಿ, ಸಿ.ಹೆಚ್.ಕುಞಂಬು, ಜಿ.ಪಂ ಅಧ್ಯಕ್ಷೆ ಪಿ.ಪಿ. ಶ್ಯಾಮಲಾದೇವಿ, ಜಿಲ್ಲಾಧಿಕಾರಿ ಕೆ.ಎಸ್.ಸತೀಶ್, ಜಿಲ್ಲಾ ವೈದ್ಯಾಧಿಕಾರಿ ಡಾ.ಜೋಸ್ ಡಿಕ್ರೂಸ್ ಜೊತೆಗಿದ್ದರು.

Posted in: Special Report