ಅಪಘಾತ-ಮಂತ್ರಿ ಭೇಟಿ: ಟ್ರಾಫಿಕ್ ಜಾಮ್

Posted on May 8, 2011

0


ಮಂಗಳೂರು: ಖಾಸಗಿ ಕಾರ್ಯ ಕ್ರಮಕ್ಕೆ ಮಂತ್ರಿಯವರು ಆಗಮಿಸುವ ವೇಳೆ ಭದ್ರತೆಗಾಗಿ ಟ್ರಾಫಿಕ್ ಜಾಮ್ ಮಾಡಲಾಗಿದ್ದ ಸಂದರ್ಭದಲ್ಲೇ ಬಸ್ಸೊಂದರ ತಾಂತ್ರಿಕ ವೈಫಲ್ಯದಿಂ ದಾಗಿ ನಡೆದ ಸರಣಿ ಅಪಘಾತದಿಂದ ಸುಮಾರು ಒಂದು ಗಂಟೆ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರು ಪರ ದಾಟ ನಡೆಸಿದ ಘಟನೆ ನಿನ್ನೆ ತೊಕ್ಕೊಟ್ಟಿನಲ್ಲಿ ನಡೆದಿದೆ.

ಜಪ್ಪಿನಮೊಗರು ಕಡೆಕಾರ್‌ನಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯ ಕ್ರಮದಲ್ಲಿ ಭಾಗವಹಿಸಲು ನಿನ್ನೆ ಸಂಜೆ ಗೃಹಮಂತ್ರಿ ಆರ್.ಅಶೋಕ್ ಅವರು ಆಗಮಿಸಿದ್ದರು. ಅದಕ್ಕೂ ಮುನ್ನ ಭದ್ರ ತೆಗಾಗಿ ತೊಕ್ಕೊಟ್ಟಿನಿಂದಲೇ ವಾಹನ ಸಂಚಾರವನ್ನು ತಡೆಹಿಡಿಯಲಾಗಿತ್ತು. ಇದೇ ವೇಳೆ ನಡುಪದವಿನಿಂದ ಮಂಗ ಳೂರಿಗೆ ಹೋಗುತ್ತಿದ್ದ ದುರ್ಗಾ ಪ್ರಸಾದ್ ಬಸ್ಸು ತೊಕ್ಕೊಟ್ಟಿನಲ್ಲಿ ಬ್ರೇಕ್ ವೈಫಲ್ಯಕ್ಕೊಳಗಾಗಿ ಬೈಕೊಂದಕ್ಕೆ ಡಿಕ್ಕಿ ಹೊಡೆದು ನಂತರ ನಿಂತಿದ್ದ ಕುಂಪಲದ ಭವ್ಯಶ್ರೀ ಬಸ್ಸಿಗೆ ಡಿಕ್ಕಿ ಹೊಡೆಯಿತು.

ಇದರಿಂದ ನಿಯಂತ್ರಣ ಕಳೆದು ಕೊಂಡ ಭವ್ಯಶ್ರೀ ಬಸ್ಸು ಚಾಲಕ ಎದು ರಿನಿಂದ ಬರುತ್ತಿದ್ದ ಹಾಲಿನ ವ್ಯಾನಿಗೆ ಡಿಕ್ಕಿ ಹೊಡೆದ, ವ್ಯಾನ್ ಎದುರಿನಲ್ಲಿದ್ದ ವೈದ್ಯರ ಕಾರು ಮತ್ತು ಕೆಎಸ್‌ಆರ್‌ಪಿ ಬಸ್ಸಿಗೆ ಡಿಕ್ಕಿ ಹೊಡೆಯಿತು. ಇದರಿಂ ದಾಗಿ ಬಸ್ಸಿನ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಬೈಕ್ ಮತ್ತು ದುರ್ಗಾ ಬಸ್ಸಿಗೆ ಹೆಚ್ಚಿನ ಹಾನಿಯಾಗಿದೆ. ಏಕಕಾಲದಲ್ಲಿ ನಡೆದ ಸರಣಿ ಅಪಘಾತ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ನೀಡಿತ್ತಾದರೂ ಮಂತ್ರಿಯ ಆಗಮನ ಕ್ಕಾಗಿ ಬ್ಲಾಕ್ ಮಾಡಿದ್ದ ಟ್ರಾಫಿಕ್, ಅಪ ಘಾತದಿಂದಾಗಿ ಇನ್ನಷ್ಟು ವಿಸ್ತರಿಸಿ ಸುಮಾರು ಒಂದು ಗಂಟೆಯ ಟ್ರಾಫಿಕ್ ಜಾಮ್‌ಗೆ ಸಾರ್ವಜನಿಕರು ತತ್ತರಿಸಿ ದರು.

Posted in: Special Report