ಹಸಿರಾದ ಪಂಚಗಂಗಾವಳಿ

Posted on May 8, 2011

0


ಕುಂದಾಪುರ: ಪಕ್ಕದಲ್ಲಿ ಹರಿಯುವ ಪಂಚಗಂಗಾವಳಿ ನದಿ ನೀರು ನಿನ್ನೆ ಎಂದಿನಂತೆ ಇರದೆ ಕಡು ಹಸಿರು ಬಣ್ಣಕ್ಕೆ ತಿರುಗಿ ನೋಡುಗರನ್ನು ಅಚ್ಚರಿ ಗೊಳಿಸಿದೆ.

ನಿನ್ನೆ ಮುಂಜಾನೆಯಿಂದಲೂ ಉಬ್ಬರದ ಸಂದರ್ಭದಲ್ಲಿ ಹರಿದು ಬಂದ ನದಿಯ ನೀರು ಎಂದಿನಂತೆ ಇರಲಿಲ್ಲ. ಭರತ ತುಂಬಿದ ಹಾಗೆ ನೀರಿನ ಬಣ್ಣವೂ ತಿಳಿ ಹಸಿರಿನಿಂದ ಕಡು ಹಸಿರಿನತ್ತ ತಿರುಗಿತು. ಈ ವಿಸ್ಮಯವನ್ನು ವೀಕ್ಷಿಸಲು ಜನರ ದಂಡೇ ನದಿ ತಟದಲ್ಲಿ ನೆರೆದಿತ್ತು. ನೆರೆದಿದ್ದ ಜನರು ತಮಗೆ ಅನಿಸಿದ ಹಾಗೆ ಈ ಬಣ್ಣದ ಕಾರಣ ನೀಡುತ್ತಾ ಹೋದದ್ದು ಸಹಾ ಕುತೂಹಲ ಕೆರಳಿಸಲು ಕಾರಣವಾಗಿತ್ತು. ಆದರೆ ವೈಜ್ಞಾನಿಕವಾಗಿ ಸಮುದ್ರದ ನೀರಿನ ವ್ಯತ್ಯಾಸವೇ ನದಿ ನೀರು ಹಸಿರು ಬಣ್ಣಕ್ಕೆ ತಿರುಗಲು ಕಾರಣವೆನ್ನಲಾಗಿದೆ.

ಸಂಜೆಯಾಗುತ್ತಿದ್ದಂತೆ ಗಂಗಾ ವಳಿಯ ನೀರು ತನ್ನ ಸಾಮಾನ್ಯ ಬಣ್ಣಕ್ಕೆ ತಿರುಗಿದೆ.

Advertisements
Posted in: Special Report