ರಾಜ್ಯ ಸರಕಾರದ ವಿರುದ್ಧ ಎಬಿವಿಪಿ ಧಿಕ್ಕಾರ!

Posted on May 8, 2011

0


ಮಂಗಳೂರು: ಸಂಘಪರಿವಾರದ ಅಂಗವಾಗಿರುವ ಎಬಿವಿಪಿ ವಿದ್ಯಾರ್ಥಿ ಸಂಘಟನೆ ರಾಜ್ಯ ಬಿ.ಜೆ.ಪಿ. ಸರಕಾರದ ಶಿಕ್ಷಣ ನೀತಿಯ ವಿರುದ್ಧ ಆಕ್ರೋಶಗೊಂಡಿದ್ದು ನಿನ್ನೆ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಅದರ ಘೋಷಣೆಗಳೇ ಇದಕ್ಕೆ ಸಾಕ್ಷಿಯಾಯಿತು.

ರಾಜ್ಯ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಶನ್ ಹಾವಳಿ ಮಿತಿ ಮೀರಿದ್ದು ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾ ಗಿದ್ದಾರೆ. ಇದನ್ನು ತಡೆದು ಎಲ್ಲರಿಗೂ ಉನ್ನತ ಶಿಕ್ಷಣಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಹಲವು ವಿದ್ಯಾರ್ಥಿ ಸಂಘಟನೆಗಳು ಈಗಾಗಲೇ ಪ್ರತಿಭಟನೆ ನಡೆಸಿವೆ. ಆದರೆ ಈ ಎಲ್ಲಾ ಪ್ರತಿಭಟನೆಗಳೂ ಬಿ.ಜೆ.ಪಿ ನೇತೃತ್ವದ ರಾಜ್ಯ ಸರಕಾರದ ವಿರೋಧಿಗಳ ಕುಮ್ಮಕ್ಕಿನಿಂದ ನಡೆಯುತ್ತಿರುವ ಪ್ರತಿಭಟನೆ ಎಂಬ ಆರೋಪ ಸರಕಾರದ ಪರ ಇರುವವರದ್ದಾಗಿದೆ.

ಆದರೆ ನಿನ್ನೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಮೂರನೇ ಪುಟಕ್ಕೆ

Advertisements
Posted in: Special Report