ಗಾಂಜಾ ಗ್ಯಾಂಗ್ಗೆಪೊಲೀಸಪ್ಪನೇ ಡೀಲರ್!

Posted on May 8, 2011

0


ಮಂಗಳೂರು: ರೈಲು ನಿಲ್ದಾಣದ ಬಳಿಯ ಗಲ್ಲಿಯೊಂದರಲ್ಲಿ ತಡರಾತ್ರಿ ನಡೆಯುತ್ತಿರುವ ಗಾಂಜಾ ವ್ಯಾಪಾರದಲ್ಲಿ ನಗರದ ಠಾಣೆಯೊಂದರ ಪೊಲೀಸನೇ ಡೀಲರ್ ಆಗಿದ್ದು, ಈತ ಗಾಂಜಾ ತಂಡಕ್ಕೆ ಪೊಲೀಸ್ ಕಿರಿಕಿರಿ ಇಲ್ಲದ ನೆಮ್ಮದಿ ನೀಡುತ್ತಿದ್ದಾನೆಂದು ತಿಳಿದು ಬಂದಿದೆ.

ಪೊಲೀಸ್ ಕಾರ್ಯಾಚರಣೆಯಿಂದ ಕಳೆದ ಕೆಲ ಸಮಯದಿಂದ ಸ್ಥಗಿತಗೊಂಡಿದ್ದ ಗಾಂಜಾ ಗ್ಯಾಂಗ್ ಹಾವಳಿ ನಗರದಲ್ಲಿ ಮತ್ತೆ ಮುಂದುವರಿದಿದೆ.

ಕೇಂದ್ರ ರೈಲು ನಿಲ್ದಾಣ, ನೆಹರೂ ಮೈದಾನ, ಲೇಡಿಗೋಷನ್ ಆಸ್ಪತ್ರೆಯ ಮುಂಭಾಗದ ಕೆಲ ಅಂಗಡಿ ಗಳು, ನಗರದ ಒಳ ಭಾಗದಲ್ಲಿರುವ ಪುಟ್ಟ ಲಾಡ್ಜ್‌ಗಳು ಇದೀಗ ಗಾಂಜಾ ಗ್ಯಾಂಗಿನಿಂದ ತುಂಬಿ ಹೋಗಿದ್ದು, ಪರೀಕ್ಷಾ ಸಿದ್ದತೆಯಲ್ಲಿರುವ ವಿದ್ಯಾರ್ಥಿಗಳು ಉದ್ವೇಗ ಕಡಿಮೆಗೊಳಿಸಲು ಗಾಂಜಾ ಮೊರೆ ಹೋಗುತ್ತಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗಾಂಜಾ ಮಾಫಿಯಾದ ಕೇಂದ್ರ ಸ್ಥಾನ ಎನಿಸಿರುವ ರೈಲು ನಿಲ್ದಾಣ ಹಾಗೂ ಇದರ ಸಮೀಪದ ಲಾಡ್ಜೊಂದರಲ್ಲಿ ನಿರಂತರ ಗಾಂಜಾ ವ್ಯವಹಾರ ನಡೆಯುತ್ತಿರುವ ಬಗ್ಗೆ ಈ ಹಿಂದೆ ಜಯಕಿರಣ ಪತ್ರಿಕೆ ವರದಿ ಪ್ರಕಟಿಸಿದಾಗ ಎಚ್ಚೆತ್ತುಕೊಂಡಿದ್ದ ಪೊಲೀಸ್ ಇಲಾಖೆ ತಡರಾತ್ರಿವರೆಗೆ ಕೆಲ ಸೂಕ್ಷ್ಮ ಪ್ರದೇಶದ ಮೇಲೆ ಕಣ್ಣಿಟ್ಟಿದ್ದವು ಪರಿಣಾಮ ತಕ್ಕ ಮಟ್ಟಿಗೆ ಗಾಂಜಾ ಗ್ಯಾಂಗ್ ವಿಶ್ರಾಂತಿ ಪಡೆದಿತ್ತು. ಈ ಕಾರಣದಿಂದ ಈಗ ಪೊಲೀಸರು ವಿಶ್ರಾಂತಿ ಪಡೆದಿದ್ದು ಗಾಂಜಾ ಗ್ಯಾಂಗ್ ಮತ್ತೆ ಸಕ್ರಿಯವಾಗಿದೆ.

ರೈಲಿನಲ್ಲಿ ತಡರಾತ್ರಿ ಬಂದು ಎಲ್ಲಿಗೂ ತೆರಳಲಾಗದೆ ರಸ್ತೆ ಬದಿ ಮಲಗುವ ಕೆಲ ಯುವಕರಿಗೆ ಈ ಗಾಂಜಾವಾಲಗಳು ಕಿರುಕುಳ ನೀಡುತ್ತಿರುವ ಬಗ್ಗೆಯೂ ದೂರು ಕೇಳಿ ಬಂದಿದೆ. ಕೆಲ ವರುಷದ ಹಿಂದೆ ಹೀಗೆ ರಸ್ತೆ ಬದಿ ಮಲಗಿದ್ದ ಯುವಕನನ್ನು ಗಾಂಜಾ ಸ್ವೀಕರಿಸಿದ್ದ ನಾಲ್ಕು ಮಂದಿ ಲೈಂಗಿಕವಾಗಿ ಬಳಸಿಕೊಂಡಿದ್ದರು. ಪರಿಣಾಮ ತೀವ್ರ ರಕ್ತಸ್ರಾವಕ್ಕೀಡಾದ ಆತ ಮೃತಪಟ್ಟಿದ್ದ. ಆದರೆ ಪೊಲೀಸ್ ಡೈರಿಯಲ್ಲಿ ಅದಿನ್ನೂ ಆಕಸ್ಮಿಕ ಮರಣ ಎಂದೇ ಇದೆ. ಇದಲ್ಲದೆ ಈಚೆಗೆ ರೈಲ್ವೆ ಬೋಗಿಯಲ್ಲೆ ಯುವತಿಯೊಬ್ಬಳ ಅತ್ಯಾಚಾರ, ಯುವಕನ ಮೇಲೆ ಹಲ್ಲೆ ಇದೆಲ್ಲದರ ಹಿಂದೆ ಗಾಂಜಾ ಗ್ಯಾಂಗೇ ಕೆಲಸ ಮಾಡಿದೆ ಎನ್ನುವುದು ಬಹಿರಂಗಗೊಳ್ಳದ ಸತ್ಯ.

ಕೇರಳದಿಂದ ರೈಲ್ವೆ ಮೂಲಕ ನಗರಕ್ಕೆ ನೇರವಾಗಿ ಪೂರೈಕೆಯಾಗುವ ಗಾಂಜಾಗಳಿಗೆ ವಿದ್ಯಾರ್ಥಿಗಳೇ ಪೂರೈಕೆದಾರರಾಗಿದ್ದಾರೆ. ಕಾಲೆಜು ಬ್ಯಾಗಿನಲ್ಲಿ ನಿಗದಿತ ಪ್ಯಾಕೇಟನ್ನು ತುಂಬಿ ಅದನ್ನು ಸೂಚಿತ ಸ್ಥಳಕ್ಕೆ ತಲುಪಿಸಿ ತಮ್ಮ ಕಮಿಷನನ್ನು ಪಡೆದು ತೆರಳುತ್ತಿದ್ದಾರೆ. ಸ್ಟೂಡೆಂಟ್ ಪಾಸಿನ ಮೂಲಕ ಬರುವ ಇಂತಹ ವಿದ್ಯಾರ್ಥಿಗಳ ಮೂರನೇ ಪುಟಕ್ಕೆ

Advertisements
Posted in: Special Report