ಕರ್ವೇಲು ಹಲ್ಲೆ ಪ್ರಕರಣ: ಇತ್ತಂಡದವರಿಗೆ ಜಾಮೀನ ು

Posted on May 8, 2011

0


ಪುತ್ತೂರು: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕರ್ವೇಲು ಎಂಬಲ್ಲಿ ನಡೆದಿದ್ದ ಪರಸ್ಪರ ಹಲ್ಲೆ ಪ್ರಕರಣದ ಒಂದು ತಂಡದ ಮೂವರು ನ್ಯಾಯಾಲಯಕ್ಕೆ ಹಾಜರಾಗಿದ್ದು, ಇನ್ನೊಂದು ತಂಡದ ಇಬ್ಬರು ನ್ಯಾಯಾಲ ಯದಿಂದ ಜಾಮೀನು ಪಡೆದುಕೊಂಡಿದ್ದಾರೆ.

ಸಾಹುಲ್ ಹಮೀದ್, ಮೊಯ್ದಿನ್ ಮತ್ತು ಮೊಹಮ್ಮದ್ ಅಬ್ಬುಂಞಿ ಎಂಬವರು ಪುತ್ತೂರು ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಅಶ್ರಫ್ ಅಗ್ನಾಡಿ, ಮಜೀದ್ ಖಾನ್ ಮತ್ತು ಕೆ.ಎಂ.ನೌಫಲ್ ವಾದಿಸಿದ್ದರು.

ಇನ್ನೊಂದು ತಂಡದ ಹಮೀದ್ ಮತ್ತು ತಯ್ಯಬ್ ಎಂಬವರನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಅವರ ಪರವಾಗಿ ನ್ಯಾಯವಾದಿ ಸಂತೋಷ್ ಕುಮಾರ್ ಉಪ್ಪಿನಂಗಡಿ ಅವರು ವಾದಿಸಿ ದ್ದರು.

Advertisements
Posted in: Special Report