ಅತಿರುದ್ರಯಾಗ: ಉಡುಪಿ ಬ್ರಾಹ್ಮಣರ ಬಹಿಷ್ಕಾರ

Posted on May 8, 2011

0


ಮಂಗಳೂರು: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಕುತ್ಯಾರು ಎಂಬಲ್ಲಿ ಅವಿಭಜಿತ ಜಿಲ್ಲಾ ಬಿಜೆಪಿಯ ಸಾರಥ್ಯದಲ್ಲಿ ಮತ್ತು ಈ ಭಾಗದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬೃಹತ್ ಕಂಪೆನಿಗಳ ಆರ್ಥಿಕ ಸಹಕಾರದೊಂದಿಗೆ ಲೋಕಕಲ್ಯಾಣಾರ್ಥ ನಡೆಸಲಾಗುತ್ತಿದೆ ಎನ್ನಲಾದ ಬಲು ಅಪರೂಪದ ಅತಿರುದ್ರಯಾಗಕ್ಕೆ ಉಡುಪಿಯ ಅಷ್ಟಮಠಾಧೀಶರ ಸಹಿತ ದ್ವೈತ ಸಿದ್ಧಾಂತ ಪ್ರತಿಪಾದಕ ಬ್ರಾಹ್ಮಣ ಸಮುದಾಯ ಬಹಿಷ್ಕರಿಸಿದೆ ಎಂದು ತಿಳಿದು ಬಂದಿದೆ.

ಹೆಸರೇ ವಿವರಿಸುವಂತೆ ಅತಿರುದ್ರಯಾಗ ಅದ್ವೈತ ವಿಧಿಯಾ ನುಸಾರ ಮುಂದುವರೆಯುತ್ತಿದ್ದು, ಇದರ ಪ್ರಧಾನ ಯಾಜ್ಞಿಕರಾಗಿ ಚಿಕ್ಕಮಗಳೂರಿನ ವೇದವಿeನ ಕೇಂದ್ರದ ಪೂರ್ವೋತ್ತರ ಮಿಮಾಂಸಕರೂ, ಪ್ರಖ್ಯಾತ ಅದ್ವೈತ ಪಂಡಿತರೂ ಆದ ಕೆ.ಎಸ್. ನಿತ್ಯಾನಂದ ಎಂಬವರು ನಿಯುಕ್ತರಾಗಿದ್ದಾರೆ.

ಯಾಗದ ದಿನಗಳಲ್ಲಿ ಜಾತಿ ಭೇದ ರಹಿತ ಸಾರ್ವಜನಿಕ ಸಹಭೋಜನ ಮತ್ತು ಯಾಗ ಸಮಾಪನ ದಿನದಂದು ಸಾರ್ವಜನಿಕ (ಆಸಕ್ತ)ರಿಗೆ ಬ್ರಹ್ಮೋಪದೇಶ ದೀಕ್ಷೆ ನೀಡಲು ಮುಂದಾಗಿರುವುದು ಉಡುಪಿ ಬ್ರಾಹ್ಮಣರ ಯಾಗ ಬಹಿಷ್ಕಾರಕ್ಕೆ ಮೂಲ ಕಾರಣವೆಂದು ಹೇಳಲಾಗಿದೆ.

ಯಾಗದ ದಿನಗಳಲ್ಲಿ ಜಾತಿ ಭೇದ ರಹಿತ ಸಾರ್ವಜನಿಕ ಸಹ ಭೋಜನ ವ್ಯವಸ್ಥೆ ಮತ್ತು ಯಾಗ ಸಮಾಪನದಂದು ಆಸಕ್ತರಿಗೆ ಬ್ರಹ್ಮೋಪದೇಶ ದೀಕ್ಷೆ ನೀಡುವ ಸಂಕಲ್ಪವನ್ನು ಯಾಗ ಸಮಿತಿ ಹೊಂದಿತ್ತು. ಆದರೆ ಈ ಎರಡನ್ನು ಒಪ್ಪದ ದ್ವೈತ ಪ್ರತಿಪಾದಕ (ಶಿವಳ್ಳಿ) ಬ್ರಾಹ್ಮಣ ಸಮುದಾಯ ಯಾಗದಲ್ಲಿ ಭಾಗವಹಿಸದಿರಲು ನಿರ್ಧರಿಸಿತು ಎಂದು ತಿಳಿದು ಬಂದಿದೆ.

ಕೆ.ಎಸ್. ನಿತ್ಯಾನಂದರ ಆಪ್ತರೋರ್ವರು ಮತ್ತು ಯಾಗ ಸಮಿತಿಯ ಪದಾಧಿಕಾರಿಯೂ ಆಗಿರುವವರಿಬ್ಬರು ಪತ್ರಿಕೆಗೆ ತಿಳಿಸಿ ರುವಂತೆ, ಯಾಗದ ಪೂರ್ವ ಸಿದ್ಧತೆಯ ಮೂರನೇ ಪುಟಕ್ಕೆ

Advertisements
Posted in: Special Report