ಅಜ್ಮೇರಾ ದರ್ಗಾ ಸ್ಫೋಟ: ಆಸೀಮಾನಂದಗೆ ಜಾಮೀನು ನ ಕಾರ

Posted on May 8, 2011

0


ನವದೆಹಲಿ: ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಆಸೀಮಾ ನಂದ ಜಾಮೀನು ಅರ್ಜಿಯನ್ನು ಸಿಬಿಐ ಕೋರ್ಟ್ ಶನಿವಾರ ವಜಾಗೊಳಿಸಿದೆ.

ಸಿಆರ್‌ಪಿಸಿ ಸೆಕ್ಷನ್ ೧೬೭(೨)ರ ಪ್ರಕಾರ ಆರೋಪ ಪಟ್ಟಿ ಸಲ್ಲಿಸದೇ ಯಾವುದೇ ಒಬ್ಬ ವ್ಯಕ್ತಿಯನ್ನು ೯೦ ದಿನಗಳಿಗಿಂತ ಹೆಚ್ಚು ಕಾಲ ಪೊಲೀಸ್ ಕಸ್ಟಡಿಯಲ್ಲಿ ಇಡುವಂತಿಲ್ಲ ಎಂದು ಅರ್ಜಿಯಲ್ಲಿ ವಿವರಿಸಿದ್ದರು. ಕಳೆದ ೯೦ ದಿನಗಳಿಂದ ತಾವು ಪೊಲೀಸ್ ವಶದ ಲ್ಲಿದ್ದು, ತನಿಖಾ ಸಂಸ್ಥೆಗಳು ತಮ್ಮ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ವಿಫಲವಾಗಿದೆ ಎಂದು ಆಸೀಮಾನಂದ ಜಾಮೀನು ಅರ್ಜಿ ಯಲ್ಲಿ ಸಲ್ಲಿಸಿದ್ದರು.

ಅಜ್ಮೇರಾ ದರ್ಗಾ ಸ್ಫೋಟದಲ್ಲಿ ಮೂರು ಮಂದಿ ಮೃತಪಟ್ಟಿದ್ದು, ೧೫ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಹೈದರಾಬಾದ್‌ನ ಮೆಕ್ಕಾ ಮಸೀದಿ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಹಾಗೂ ಮಾಲೆಗಾಂವ್ ಸ್ಫೋಟ ಪ್ರಕರಣಗಳಲ್ಲೂ ಈತ ಆರೋಪಿ ಯಾಗಿದ್ದಾನೆ. ಈ ಮಧ್ಯೆ ಆಸೀಮಾನಂದ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಿಬಿಐ ಹೆಚ್ಚಿನ ಕಾಲಾವಕಾಶ ಕೇಳಿತ್ತು.

Advertisements
Posted in: Special Report