ಉದ್ಯಮಿ ಮೇಲೆ ವಂಚನೆ ಆರೋಪ

Posted on May 7, 2011

0


ಬಂಟ್ವಾಳ: ಬಿ.ಸಿ.ರೋಡಿನ ಉದ್ಯಮಿ, ಅಮರ್ ಸಂಸ್ಥೆಯ ಮಾಲಕ ಸತೀಶ್ ಕುಮಾರ್ ಅಲಿಯಾಸ್ ಅಮರ್ ಸತೀಶ್ ಮೇಲೆ ಗ್ಲೋಬಲ್ ಇಂಡೆಕ್ಸ್ ಕಂಪೆನಿಯ ಹೆಸರಿನಲ್ಲಿ ಸಾರ್ವಜನಿಕರಿಗೆ ಪಂಗನಾಮ ಹಾಕಿದ ಪ್ರಕರಣವೊಂದು ಇಲ್ಲಿನ ನಗರ ಠಾಣೆಯ ಮೆಟ್ಟಿಲೇರಿದೆ. ಜನರು ಹೂಡಿದ ಲಕ್ಷಾಂತರ ರೂ. ಗುಳುಂ ಮಾಡಿರುವುದಾಗಿ ಆರೋಪಿಸಿ ರುವ ಧರ್ಮಸ್ಥಳ ಶ್ರೀ ರಾಮ ಕ್ಷೇತ್ರದ ಸಂಚಾಲಕ ಕೃಷ್ಣಪ್ಪ ಪೂಜಾರಿ ಅವರು ನಗರ ಠಾಣಾಧಿಕಾರಿ ವಿವೇಕಾನಂದ ಅವರಿಗೆ ದೂರು ನೀಡಿದ್ದಾರೆ.

ಆರೋಪಿತ ಸತೀಶ್ ಬಿ.ಸಿ.ರೋಡಿನ ಕೆ.ಇ.ಬಿ. ಬಳಿ ಇರುವ ಅಮರ್ ರೆಸಿಡೆನ್ಸಿಯಲ್ಲಿ ವಾಸವಾಗಿದ್ದು, ಇವರ ಅಣ್ಣ ಅಶೋಕ್ ಕುಮಾರ್ ಎಂಬಾತ ನನ್ನು ಮಂಗಳೂರು ಪೊಲೀಸರು ಗ್ಲೋಬಲ್ ಇಂಡೆಕ್ಸ್ ವಂಚನೆ ಆರೋಪದಲ್ಲಿ ಬಂಧಿಸಿದ್ದರು. ಈ ನಡುವೆ ವಂಚನೆ ವಿರುದ್ಧ ಧರಣಿಯೂ ನಡೆಸಲಾಗಿತ್ತು. ಹಣದ ಹೂಡಿಕೆಯಲ್ಲಿ ಸತೀಶ್ ಕೂಡ ಪಾಲುದಾರಿಕೆ ಹೊಂದಿದ್ದರೆನ್ನುವುದು ಹಣ ಕಳೆದುಕೊಂಡವರ ಆರೋಪವಾಗಿತ್ತು.

Posted in: Special Report