ತಪ್ಪು ಮಾಹಿತಿಯ ಎಡವಟ್ಟು: ಸೈನಿಕನಿಗೆ ಬಜರಂಗದಳ ಹಲ್ಲೆ

Posted on May 7, 2011

0


ಬೆಳ್ತಂಗಡಿ: ಅಕ್ಕನೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಭೂಸೇನೆಯ ಜವಾನನನ್ನು ತಡೆದ ಹಿಂದೂ ಸಂಘಟನೆಯವರೆನ್ನಲಾದ ತಂಡವೊಂದು ಯುವತಿ ಯೊಂದಿಗೆ ತಿರುಗಾಡುತ್ತಿದ್ದೀಯಾ ಎಂದು ಹೇಳಿ ಹಲ್ಲೆ ನಡೆಸಿದ ಘಟನೆ ಶುಕ್ರವಾರ ಬೆಳಿಗ್ಗೆ ೧೧ ಗಂಟೆಯ ಸುಮಾರಿಗೆ ಇಲ್ಲಿಯ ಮುಂಡಾಜೆ ಸಮೀಪ ನಡೆದಿದೆ.

ಸಕಲೇಶಪುರ ತಾಲೂಕಿನ ನೇರಳಮಕ್ಕಿ ಗ್ರಾಮದ ಎಂ.ಎಂ. ಜೋಸೆಫ್ ಎಂಬವರ ಪುತ್ರ ಬಿಜು ಎಂ.ಜೆ. ಎಂಬವರೇ ಹಲ್ಲೆ ಗೊಳಗಾದ ಭೂಸೇನೆಯ ಜವಾನ.

ಅಸ್ಸಾಂನಲ್ಲಿ ಕೆಲಸ ಮಾಡುತ್ತಿರುವ ಬಿಜು ಅವರು ರಜೆಯಲ್ಲಿ ಊರಿಗೆ ಬಂದಿದ್ದರು. ಈ ವೇಳೆ ಹುಡುಗಿ ನೋಡಲೆಂದು ಬೈಕ್‌ನಲ್ಲಿ ಅಕ್ಕನೊಂದಿಗೆ ಮುಂಡಾಜೆಗೆ ಹೋಗಿ ಹಿಂತಿ ರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಮುಂಡಾಜೆ ಅರಣ್ಯ ಇಲಾಖೆಯ ನರ್ಸರಿಯ ಬಳಿ ಎರಡು ಬೈಕ್‌ಗಳಲ್ಲಿ ಬಂದ ತಂಡ ಅಡ್ಡಗಟ್ಟಿ ಅಕ್ಕ ಮತ್ತು ನನ್ನನ್ನು ತಡೆದು ಹಲ್ಲೆ ನಡೆಸಿದ್ದಾರೆಂದು ಬಿಜು ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿ ದ್ದಾರೆ. ಸ್ಥಳೀಯ ನಿವಾಸಿಗಳಾದ ಹರೀಶ್, ಲೋಕೇಶ್ ಮತ್ತು ಬೊಮ್ಮಣ್ಣ ಎಂಬವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಬೆಳ್ತಂಗಡಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಪ್ಪು ಮಾಹಿತಿಯಿಂದಾಗಿ ತನ್ನ ಮನೆಯ ವರೊಂದಿಗೆ ತೆರಳಿದರೂ ಪೆಟ್ಟು ತಿನ್ನುವಂತಹ ಪರಿಸ್ಥಿತಿ ಬಂದೊದಗಿದ್ದು, ಇಂತಹ ಹೇಯ ಕೃತ್ಯದಿಂದ ಸಂಘಟನೆಗಳಿಗೆ ಕೆಟ್ಟ ಹೆಸರು ಅಂಟಿಕೊಂಡಿದೆ. ಇನ್ನಾದರೂ ಸಂಘಟನೆ ಗಳು ಇಂತಹ ಘಟನೆಗಳು ನಡೆಯದಂತೆ ಸುಳ್ಳು ಹೇಳಿ ಸಂಘಟನೆಯ ಹೆಸರು ಕೆಡಿಸು ವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

Advertisements
Posted in: Special Report