ಕಾರ್ಮಿಕರಿಗೆ ಹಲ್ಲೆ: ಐಪಿಎಸ್ ಅಧಿಕಾರಿ ವಿರುದ್ ಧ ಪ್ರತಿಭಟನೆ

Posted on May 7, 2011

0


ಪುತ್ತೂರು: ಇಲ್ಲಿನ ಪಾಣಾಜೆ ಬೈಲಾಡಿ ಸೇತುವೆಗೆ ಸಂಪರ್ಕ ರಸ್ತೆ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕ ರಿಗೆ ಐಪಿಎಸ್ ಅಧಿಕಾರಿ ಹಲ್ಲೆ ನಡೆಸಿ ದ್ದರಿಂದ ಸಿಡಿದೆದ್ದ ಕಾರ್ಮಿಕರು ಸಂಪ್ಯ ಠಾಣೆ ಮುಂದೆ ಪ್ರತಿಭಟನೆ ನಡೆಸಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಪಾಣಾಜೆ ಬೈಲಾಡಿ ಸೇತುವೆಗೆ ಸಂಪರ್ಕ ರಸ್ತೆ ಕಾಮಗಾರಿಯನ್ನು ಮೊಗರೋಡಿ ಕನ್ಸ್‌ಸ್ಟ್ರಕ್ಷನ್ಸ್ ವಹಿಸಿತ್ತು. ನಿನ್ನೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಲಾರಿಯ ಬಳಿ ಬಂದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಅಭಿ ನವ್ ಖರೆ ಕಾರ್ಮಿಕರಾದ ದಿನೇಶ್ ಹಾಗೂ ಜಯಕುಮಾರ್ ಎಂಬವ ರಲ್ಲಿ ಕೆಲಸದ ಲೈಸನ್ಸ್ ಕೇಳಿದ್ದಾರೆ. ಇವರಿಬ್ಬರೂ ಮಾಲಕರಲ್ಲಿದೆಯೆಂದು ಹೇಳುವಷ್ಟರಲ್ಲಿ ಅಧಿಕಾರಿ ಇಬ್ಬರಿಗೂ ಎರಡೇಟು ಬಿಗಿದಿದ್ದಾರೆ. ಕಾರಣ ಅಧಿಕಾರಿಗೆ ಕನ್ನಡ ಭಾಷೆ ಬರುತ್ತಿರಲಿಲ್ಲ ಅವರು ಹೇಳಿದುದನ್ನು ತಪ್ಪಾಗಿ ಅರ್ಥೈಸಿಕೊಂಡು ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ. ಬಳಿಕ ಎರಡು ಲಾರಿ ಗಳನ್ನು ವಶಪಡಿಸಿಕೊಂಡು ಸಂಪ್ಯ ಠಾಣೆಯಲ್ಲಿರಿಸಲಾಗಿತ್ತು. ಘಟನೆ ಯಿಂದ ರೊಚ್ಚಿಗೆದ್ದ ಕಾರ್ಮಿಕರು ರಾತ್ರಿ ವೇಳೆ ಸಂಪ್ಯ ಠಾಣೆ ಮುಂದೆ ಜಮಾ ಯಿಸಿ ಅಧಿಕಾರಿ ವಿರುದ್ಧ ಘೋಷಣೆ ಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿ ದರು.

ಸ್ಥಳಕ್ಕೆ ಭೇಟಿ ನೀಡಿದ ಸರ್ಕಲ್ ಇನ್ಸ್‌ಪೆಕ್ಟರ್ ಮಂಜಯ್ಯ, ತಾ.ಪಂ. ಅಧ್ಯಕ್ಷ ಶಂಭುಭಟ್, ಎ.ಸಿ ಹರೀಶ್ ಕುಮಾರ್ , ಬೆಟ್ಟಂಪಾಡಿ ಗ್ರಾ..ಪಂ ಉಪಾಧ್ಯಕ್ಷ ಪ್ರಕಾಶ್ ರೈ ಎಲ್ಲರೂ ಸೇರಿ ಪಂಚಾಯ್ತಿಕೆ ನಡೆಸಿ ಪ್ರಕರಣವನ್ನು ರಾಜಿಯಲ್ಲಿ ಮುಕ್ತಾಯಗೊಳಿಸಿ ವಶಪಡಿಸಿಕೊಂಡಿರುವ ಲಾರಿಯನ್ನು ಪೊಲೀಸರು ಬಿಟ್ಟುಬಿಟ್ಟಿದ್ದಾರೆ.

Advertisements